ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಬಿಡುಗಡೆಯಾಗಲು ಇನ್ನು ಕೆಲವೇ ದಿನಗಳು ಬಾಕಿ ಇದ್ದು,ಇದೇ ಭಾನುವಾರದಂದು ಸಿನಿಮಾದ ಆನ್ಲೈನ್ ಬುಕಿಂಗ್ ಕೂಡ ಪ್ರಾರಂಭವಾಗಲಿದೆ.
ಸಧ್ಯ ಬಂದಿರುವ ಮಾಹಿತಿ ಪ್ರಕಾರ ದೇಶಾದ್ಯಂತ 2000 ಥೇಟರ್ ಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.ಕರ್ನಾಟಕವೊಂದರಲ್ಲಿಯೇ 350ಕ್ಕೂ ಅಧಿಕ ಥೇಟರ್ ನಲ್ಲಿ ಬಿಡುಗಡೆಯಾಗಲಿದೆ.ಕೆಲವು ಥೇಟರ್ ಕರ್ನಾಟಕದಲ್ಲಿ ತೆಲುಗು, ತಮಿಳು, ಹಿಂದಿ,ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ
ತೆಲುಗಿನಲ್ಲಿ ವಾರಾಹಿ ಚಲನ ಚಿತ್ರಂ ವಿತರಕ ಸಂಸ್ಥೆ ತೆಲಂಗಾಣ ಮತ್ತು ಆಂಧ್ರಪ್ರದೇಶದ 350ಕ್ಕೂ ಅಧಿಕ ಥೇಟರ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.ಇನ್ನೊಂದೆಡೆಗೆ ತಮಿಳಿನಲ್ಲಿ ವಿಶಾಲ್ ಫ್ಯಾಕ್ಟರಿ ಫಿಲಂಸ್ 150ಕ್ಕೂ ಅಧಿಕ ಥೇಟರ್ ಗಳಲ್ಲಿ ಬಿಡುಗಡೆ ಮಾಡುತ್ತಿದೆ.
ಕೇರಳದಲ್ಲಿ ಗ್ಲೋಬಲ್ ಯುನೈಟೆಡ್ ಮೀಡಿಯಾ ಸುಮಾರು 75 ಚಿತ್ರಮಂದಿರಗಳಲ್ಲಿ ಮಲಯಾಳಂ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದೆ.ಅನಿಲ್ ಥಾಡಾನಿಯ ಹಾಗೂ ಫರ್ಹಾನ್ ಅಖ್ತರ್ ಎಕ್ಸೆಲ್ ಎಂಟರಟೆನ್ಮೆಂಟ್ ಸಂಸ್ಥೆ ಹಿಂದಿಯಲ್ಲಿ ಸುಮಾರು 1,000 ಥಿಯೇಟರ್ಗಳಲ್ಲಿ ಕೆಜಿಎಫ್ ಸಿನಿಮಾವನ್ನು ಚಿತ್ರವನ್ನು ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ
ರಾಕಿಂಗ್ ಸ್ಟಾರ್ ಯಶ್, ಹಾಗೂ ಶ್ರೀನಿಧಿ ಶೆಟ್ಟಿ ನಟಿಸಿರುವ ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ.