ಬೆಂಗಳೂರು, ಡಿ.16- ಕೌಶಲ್ಯ ಅಭಿವೃದ್ಧಿ ಕಡೆಗೆ ತನ್ನ ಸುಸ್ಥಿರ ಪ್ರಯತ್ನಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಲ್ಲಿ ಟೊಯೋಟಾ ಉತ್ಕøಷ್ಟತಾ ಕೇಂದ್ರವನ್ನು ತೆರೆದಿದೆ.
ಬೆಳೆಯುತ್ತಿರುವ ಕೈಗಾರಿಕಾ ಅಗತ್ಯಗಳನ್ನು ಪೂರೈಸಲು ಬೇಕಾದ ಕೌಶಲ್ಯಪೂರ್ಣ ಕಾರ್ಯಪಡೆಯನ್ನು ವಿಸ್ತರಿಸಲು ಟೊಯೋಟಾ ಸೆಂಟರ್ ಆಫ್ ಎಕ್ಸ್‍ಲೆನ್ಸ್ ಅನ್ನು ವಿವಿಧ ಕಾಲೇಜುಗಳಲ್ಲಿ ಸ್ಥಾಪಿಸುವ ಚಿಂತನೆ ಕೈಗೊಂಡಿದೆ.
ತಳಮಟ್ಟದಲ್ಲಿ ಇಂಜಿನ್‍ನ ರಚನೆಯ ಜ್ಞಾನ ತಲುಪುವುದನ್ನು ನೆರವಾಗಲು ವಾಹನದ ಇಂಜಿನ್‍ನ ಅರ್ಧ ಕತ್ತರಿಸಿದ ಮಾದರಿ ಮತ್ತು ಜೋಡಿಸಲಾದ ಸಂಪೂರ್ಣ ಇಂಜಿನ್ ಒಂದನ್ನು ಟೊಯೋಟಾ ಹಸ್ತಾಂತರಿಸಿದೆ.
ವಿದ್ಯಾರ್ಥಿಗಳಿಗೆ ಸಮಗ್ರ ಕಲಿಕಾ ಅವಕಾಶಗಳನ್ನು ಮಾಡಿಕೊಡುವುದು, ವಾಹನ ಇಂಜಿನ್ ಕುರಿತಂತೆ ಅವರಿಗೆ ನೆರವಾದ ಅನುಭವ ಸಾದರಪಡಿಸುವತ್ತ ಪ್ರಮುಖ ಗಮನ ಕೇಂದ್ರೀಕರಿಸಲಾಗಿದೆ.
ಇಂಜಿನ್ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಮಧ್ಯದಲ್ಲಿ ಕತ್ತರಿಸಿದ ಇಂಜಿನ್‍ನ ಮಾದರಿ ಪ್ರದರ್ಶಿಸಲಿದೆ.ಜೋಡಿಸಲಾದ ಇಂಜಿನ್‍ನ ಮಾದರಿ ವಿದ್ಯಾರ್ಥಿಗಳಿಗೆ ಅದರೊಳಗಿನ ಭಾಗಗಳ ಬಗ್ಗೆ ನೈಜ ಅರಿವು ಪಡೆಯಲು ನೆರವಾಗಲಿದೆ. ಅಲ್ಲದೆ, ಇಂಜಿನ್‍ಗಳನ್ನು ಜೋಡಿಸುವುದು ಮತ್ತು ಅದರ ಭಾಗಗಳನ್ನು ಬಿಡಿಸುವ ತಂತ್ರಗಳನ್ನು ಕಲಿಸಲಿದೆ.ಇದರೊಂದಿಗೆ ಇಂಜಿನ್ ಕಾರ್ಯಾಚರಣೆ ತಂತ್ರದಲ್ಲಿ ಉನ್ನತ ಗುಣಮಟ್ಟದ ಕೌಶಲ್ಯ ಸಾಧನೆ ಸಾಧ್ಯವಾಗಲಿದೆ.
ಕಾರ್ಯಕ್ರಮದಲ್ಲಿ ನ್ಯಾಷನಲ್ ಎಜುಕೇಷನ್ ಫೌಂಡೇಷನ್‍ನ ಕಾರ್ಯದರ್ಶಿ ಲೇಪಾಕ್ಷ.ಎಸ್, ನ್ಯಾಷನಲ್ ಎಜುಕೇಷನ್ ಫೌಂಡೇಷನ್‍ನ ಹೆಚ್ಚುವರಿ ಕಾರ್ಯದರ್ಶಿ ವೆಂಕಟಪ್ಪ ಮತ್ತು ನ್ಯಾಷನಲ್ ಎಜುಕೇಷನ್ ಫೌಂಡೇಷನ್‍ನ ಕಾರ್ಯದರ್ಶಿ ಡಿ.ಕೆ.ಎಸ್.ಐಶ್ವರ್ಯ, ಟೊಯೋಟಾ ಕಿರ್ಲೋಸ್ಕರ್ ಮೋಟಾರ್‍ನ ಹಿರಿಯ ಆಡಳಿತ ತಂಡವನ್ನು ಪ್ರತಿನಿಧಿಸಿದ್ದ ಉಪಾಧ್ಯಕ್ಷ ಬಿ.ಪದ್ಮನಾಭ ಮತ್ತು ಉಪಾಧ್ಯಕ್ಷ ನವೀನ್ ಸೋನಿ ಹಾಜರಿದ್ದರು.