ತುಮಕೂರು, ಡಿ.16- ಕಲ್ಯಾಣ ಮಂಟಪಗಳಲ್ಲಿ ಕ್ಯಾಮೆರಾಗಳನ್ನು ಕಳ್ಳತನ ಮಾಡುತ್ತಿದ್ದಇಬ್ಬರು ಖದೀಮರನ್ನುತಿಲಕ್‍ಪಾರ್ಕ್ ಪೊಲೀಸರು ಬಂಧಿಸಿ ಲಕ್ಷಾಂತರ ಮೌಲ್ಯದ ಕ್ಯಾಮೆರಾಗಳನ್ನು ವಶಪಡಿಸಿಕೊಂಡಿದ್ದಾರೆ.
ಮದನ್ ಬಿ.ಓಂಕಾರ್, ಕೃಷ್ಣ ಬಂಧಿತ ಆರೋಪಿಗಳು.
ನಗರದ ಕೆಎಚ್‍ಬಿ ಕಾಲೋನಿ ಬಿ.ಎಚ್.ರಸ್ತೆಯಲ್ಲಿರುವ ಬಂಡಿಕಲ್ಯಾಣ ಮಂಟಪದಲ್ಲಿ ಮದುವೆ ನಡೆಯುತ್ತಿದ್ದ ವೇಳೆ ಸಂಬಂಧಿಕರಂತೆ ಇಬ್ಬರು ಹೋಗಿದ್ದಾರೆ.
ಈ ಇಬ್ಬರು ಅನುಮಾನಸ್ಪದವಾಗಿ ಓಡಾಡುತ್ತಿರುವುದನ್ನು ಕಂಡ ಮದುವೆ ಮನೆಯವರು ಇವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪಿಎಸ್‍ಐ ಶ್ರೀಲಕ್ಷ್ಮಯ್ಯ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕಲ್ಯಾಣಮಂಟಪಗಳಲ್ಲಿ ಬೆಲೆ ಬಾಳುವ ವಸ್ತುಗಳು ಮತ್ತು ಕ್ಯಾಮೆರಾಗಳನ್ನು ಕಳ್ಳತನ ಮಾಡುತಿದ್ದುದ್ದಾಗಿ ಒಪ್ಪಿಕೊಂಡಿದ್ದಾರೆ.
ಆರೋಪಿಗಳಿಂದ ಕ್ಯಾಮೆರಾ ಮತ್ತುಎರಡು ಫ್ಲ್ಯಾಷ್‍ಗಳು, ಒಂದು ಫ್ಲ್ಯಾಷ್‍ಚಾರ್ಜರ್ ಸೇರಿದಂತೆ 6.12 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಿಲಕ್‍ಪಾರ್ಕ್ ಪೊಲೀಸ್‍ಠಾಣೆಯಲ್ಲಿ ಪ್ರಕರಣದಾಖಲಾಗಿದೆ.