ವೈದ್ಯರು ಮತ್ತು ಆಸ್ಪತ್ರೆ ಮೇಲೆ ಸರಿಯಾದ ಮಾಹಿತಿ ಇಲ್ಲದೇ ದಾಳಿ ನಡೆಸುವುದು ಸರಿಯಿಲ್ಲ

ಬೆಂಗಳೂರು, ಡಿ.14- ರೋಗಿಗಳನ್ನು ಚಿಕಿತ್ಸೆ ಸಂದರ್ಭದಲ್ಲಿ ಮರಣ ಹೊಂದಿದರೆ ಸರಿಯಾದ ಮಾಹಿತಿ ತಿಳಿಯದ ರೋಗಿಗಳ ಸಂಬಂಧಿಕರು ವೈದ್ಯರು, ಆಸ್ಪತ್ರೆ ಮೇಲೆ ಹಲ್ಲೆ ಮತ್ತು ದಾಳಿ ಮಾಡುವುದು ದುರದೃಷ್ಟಕರ ಎಂದು ಪಾಲಿಕೆ ಸದಸ್ಯ ಡಾ.ಎಸ್.ರಾಜು ಅಭಿಪ್ರಾಯಪಟ್ಟಿದ್ದಾರೆ.

ವಿಜಯನಗರದ ಕ್ಯೂಟಿಸ್ ಆಸ್ಪತ್ರೆಯಲ್ಲಿ ನಡೆದ ವಿಸಿಎನ್ ಡಾಕ್ಟರ್ಸ್ ವೆಲ್ ಫೇರ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ವೈದ್ಯರ ಮೇಲೆ ಹಲ್ಲೆ ಮತ್ತು ಆಸ್ಪತ್ರೆ ಮೇಲೆ ರೋಗಿಗಳ ಸಂಬಂಧಿಕರ ದಾಳಿ ಬಗ್ಗೆ ಹಾಗೂ ವೈದ್ಯರ ರಕ್ಷಣೆಗೆ ಕರ್ನಾಟಕ ಮೆಡಿಕಲ್ ಕೌನ್ಸಿಲ್ ನಿಯಮಗಳ ಅರಿವು ಮೂಡಿಸುವ ಹಾಗೂ ಸಾಕ್ಷ್ಯ ಚಿತ್ರ ಪ್ರದರ್ಶವನ್ನು ಉದ್ಘಾಟಿಸಿ ಮಾತನಾಡಿದರು.

ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ರೋಗಿಗಳನ್ನು ಸಾಯಲು ಬಿಡುವುದಿಲ್ಲ. ಅವರನ್ನು ಬದುಕಿಸಲು ಶತ ಪ್ರಯತ್ನ ಮಾಡುತ್ತಾರೆ.ಆದರೆ ಸಮಾಜದಲ್ಲಿ ವೈದ್ಯರನ್ನು ತಾತ್ಸಾರದಲ್ಲಿ ನೋಡುತ್ತಾರೆ.ಇಂದು ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದರೆ ಆಲೋಚನೆ ಮಾಡಬೇಕಾದ ಪರಿಸ್ಥಿತಿಯಿದೆ ಎಂದು ಹೇಳಿದರು.
ವೈದ್ಯರು ಮತ್ತು ಸಾರ್ವಜನಿಕರ ಹಾಗೂ ರೋಗಿಗಳ ಜೊತೆಯಲ್ಲಿ ಉತ್ತಮ ಬಾಂಧವ್ಯ ಮೂಡುವಂತೆ ಅರಿವು ಮೂಡಿಸಬೇಕು.ಪೆÇಲೀಸರು ಕೂಡಾ ಕೆಲವೊಮ್ಮೆ ಸತ್ಯಾಸತ್ಯತೆ ಅರಿಯದೆ ವೈದ್ಯರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ.ವೈದ್ಯರಿಗೆ ರಕ್ಷಣೆ ಸಿಗುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ