ಕಳೆದ ರಾತ್ರಿ ನಗರ ಪ್ರದಕ್ಷಿಣೆ ನಡೆಸಿದ ಮೇಯರ್

ಬೆಂಗಳೂರು,ಡಿ.14- ಮೇಯರ್ ಗಂಗಾಭಿಕೆ ಕಳೆದ ರಾತ್ರಿ ನಗರ ಪ್ರದಕ್ಷಿಣೆ ನಡೆಸಿ ಬೀದಿ ದೀಪಗಳ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.

ತಪಾಸಣೆ ವೇಳೆ ಪ್ರಮುಖವಾಗಿ ಸಹಕಾರಕಾರ ನಗರ, ಕೆಂಪೇಗೌಡ, ಬಸವಲಿಂಗಪ್ಪ ಉದ್ಯಾನವನಗಳ ಬೀದಿ ದೀಪಗಳ ನಿರ್ವಹಣೆ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಇದುವರೆವಿಗೂ ಕಳೆದ ಸಭೆಯ ನಂತರ ಒಟ್ಟು 3 ಲಕ್ಷ ರೂ.ದಂಡ ವಿಧಿಸಿದ್ದು, ಅದರಿಂದಾಗಿ ಗುತ್ತಿಗೆದಾರರಿಂದ ಸಮರ್ಪಕವಾಗಿ ವಿದ್ಯುತ್ ದೀಪ ನಿರ್ವಹಣೆ ಮಾಡಲಾಗುತ್ತಿದ್ದು ಬಹುತೇಕ ಎಲ್ಲಾ ವಿದ್ಯುತ್ ದೀಪಗಳು ಉರಿಯುತ್ತಿರುವುದು ಕಂಡು ಬಂದಿತು.

ಜಂಟಿ ಆಯುಕ್ತ ಡಾ.ನಾಗರಾಜ್, ಮುಖ್ಯ ಅಭಿಯಂತರ ಪರಮೇಶ್ವರ್ ಹಾಗೂ ಎಲೆಕ್ಟ್ರಿಕ್ ಅಭಿಯಂತರ ರಾಜೇಂದ್ರ ನಾಯಕ್‍ರವರು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮುಂದೆಯೂ ಇದೇ ರೀತಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.

ಅಲ್ಲದೇ, ಅಂತರಾಷ್ಟ್ರೀಯ ವಿಮಾನ ರಸ್ತೆಯಲ್ಲಿರುವ ಬೀದಿ ದೀಪಗಳು ಕೆಲ ಭಾಗದಲ್ಲಿ ಉರಿಯದೆ ಕತ್ತಲೆಯಿಂದ ಕೂಡಿತ್ತು. ಸದರಿ ರಸ್ತೆಯ ಬೀದಿ ದೀಪಗಳ ನಿರ್ವಹಣೆಯನ್ನು ಸ್ಥಳೀಯ ಪ್ರಾಧಿಕಾರವೇ ನಿರ್ವಹಿಸುತ್ತಿದ್ದು, ಸದರಿ ವಿಭಾಗದ ಮುಖ್ಯಸ್ಥರಿಗೆ ಪತ್ರ ಬರೆದು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಸೂಚಿಸುವಂತೆ ವಲಯ ಆಯುಕ್ತರಿಗೆ ತಿಳಿಸಿದರಲ್ಲದೇ, ಈ ಬಗ್ಗೆ ಶೀಘ್ರವಾಗಿ ಕ್ರಮ ವಹಿಸಿ ವರದಿ ನೀಡಲು ಆದೇಶಿಸಿದರು.

ನಂತರ ಸಂದೀಪ್ ಉನ್ನೀ ಕೃಷ್ಣನ್ ರಸ್ತೆಯಲ್ಲಿ ಸುಮಾರು 300 ಮೀಟರ್ ಉದ್ದ ರಸ್ತೆಯು ಸಂಪೂರ್ಣವಾಗಿ ಹಾಳಾಗಿ ಸಂಚಾರ ಮಾಡಲು ತುಂಬಾ ತೊಂದರೆಯಾಗುತ್ತಿದ್ದು, ಸುಗಮ ಸಂಚಾರಕ್ಕಾಗಿ ತಾತ್ಕಾಲಿಕವಾಗಿ ವೆಟ್ ಮಿಕ್ಸ್ /ಮೋಟರೆಬಲ್ ಹಾಕಿ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಎರಡು ದಿನಗಳ ಒಳಗಾಗಿ ಕ್ರಮ ಕೈಗೊಳ್ಳುವಂತೆ ಮೇಯರ್ ಆದೇಶಿಸಿದರು.

ತಂದ ನಂತರ ರಾತ್ರಿ 10 ಗಂಟೆಗೆ ನೃಪತುಂಗ ರಸ್ತೆಯಲ್ಲಿ ಮೆಕಾನಿಕಲ್ ಸ್ವೀಪಿಂಗ್ ಮೆಷಿನ್ ಮುಖಾಂತರ ಸ್ವಚ್ಛಗೊಳಿಸುವ ಕಾರ್ಯವನ್ನು ಪರಿಶೀಲಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ