ಬೆಂಗಳೂರು, ಡಿ.14- ಆನ್‍ಲೈನ್ ಔಷಧಗಳ ಮಾರಾಟವನ್ನು ದೇಶಾದ್ಯಂತ ನಿಷೇಧ ಮಾಡಿರುವ ದೆಹಲಿಯ ಉಚ್ಚ ನ್ಯಾಯಾಲಯದ ತೀರ್ಪನ್ನು ಎಫ್‍ಕೆಸಿಸಿಐ ಸ್ವಾಗತಿಸಿದೆ.
ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಕೇಂದ್ರದಆರೋಗ್ಯ ಮಂತ್ರಾಲಯವು 328 ಎಫ್‍ಡಿಸಿ ಔಷಧಗಳ ಉತ್ಪಾದನೆ, ಮಾರಾಟ ಮತ್ತು ಹಂಚಿಕೆಯನ್ನು ಸ್ಥಗಿತಗೊಳಿಸಿತ್ತು.
ಭಾರತದಆರ್ಥಿಕತೆಯುಪ್ರಪಂಚದಲ್ಲಿಯೇಮಾನವ ಸಂಪನ್ಮೂಲದ ಮೇಲೆ ಅವಲಂಬಿಸಿದೆ.ಭಾರತವು 2ನೇ ಅತಿದೊಡ್ಡ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದ್ದು, ಅದರಲ್ಲಿ ಶೇ.15ಕ್ಕಿಂತ ಹೆಚ್ಚು ಸುಮಾರು 19 ಕೋಟಿಜನರು 25ರ ವಯಸ್ಸಿನ ಒಳಗಿನವರು ಇದ್ದಾರೆ.ಆನ್‍ಲೈನ್‍ಟ್ರೇಡಿಂಗ್‍ನಿಂದ ಅವರ ಉದ್ಯೋಗಾವಕಾಶಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಆನ್‍ಲೈನ್ ಮಾರಾಟವು ಸಣ್ಣ ಹಾಗೂ ಮಧ್ಯಮ ವ್ಯಾಪಾರಿಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರಲಿದೆ. ದೇಶದಲ್ಲಿ ನಿರುದ್ಯೋಗವನ್ನು ಹೆಚ್ಚಿಸುವ ಜೊತೆಗೆ, ಆನ್‍ಲೈನ್‍ಟ್ರೇಡಿಂಗ್‍ಎಲ್ಲಾ ವ್ಯಾಪಾರಿಕ ಕ್ಷೇತ್ರಗಳಿಗೆ ನಿಷೇಧ ಅನ್ವಯವಾಗಬೇಕು ಎಂದು ಎಫ್‍ಕೆಸಿಸಿಐ ಹೇಳಿದೆ.
ಆನ್‍ಲೈನ್ ಔಷಧಗಳ ಮಾರಾಟವು ನಮ್ಮದೇಶದಆರ್ಥಿಕತೆಯ ವ್ಯವಸ್ಥೆಗೆ ಪೂರಕವಾಗಿರುವುದಿಲ್ಲ.ಅಷ್ಟೇ ಅಲ್ಲದೇ ಹೆಚ್ಚು ಶಕ್ತಿಯುತವಾದ ಔಷಧಿಗಳ ದುರುಪಯೋಗ ಸಾಮಾನ್ಯಜನರ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಎಫ್‍ಕೆಸಿಸಿಐ ಅಧ್ಯಕ್ಷ ಸುಧಾಕರ್‍ಎಸ್. ಶೆಟ್ಟಿ ತಿಳಿಸಿದ್ದಾರೆ.
ಆನ್‍ಲೈನ್ ಔಷಧಗಳ ಮಾರಾಟಕ್ಕೆ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯಿದೆ 1940 ಮತ್ತು ಔಷಧಾಲಯ ಕಾಯಿದೆ 1948ರಡಿಯಲ್ಲಿಯೂ ಸಹ ಯಾವುದೇ ಅವಕಾಶವಿರುವುದಿಲ್ಲ ಎಂದು ಅವರು ತಿಳಿಸಿದರು.
ಎಫ್‍ಕೆಸಿಸಿಐ ಆನ್‍ಲೈನ ಔಷಧಗಳ ಮಾರಾಟದ ನಿಷೇಧವನ್ನು ಸ್ವಾಗತಿಸುತ್ತೇವೆ ಇದೇರೀತಿಯಾಗಿಎಲ್ಲಾಆನ್‍ಲೈನ್‍ಟ್ರೇಡಿಂಗ್ ವಹಿವಾಟುಗಳನ್ನು ನಿಷೇಧಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.