ಗ್ರಾಹಕರಿಗೆ ಪೇಟಿಯಂ ಕ್ಯಾಷ್ ಬ್ಯಾಕ್ ಡೇಸ್ ಸಂಭ್ರಮ

ಬೆಂಗಳೂರು, ಡಿ.14-ದೇಶದ ಒಂದು ಕೋಟಿಗೂ ಹೆಚ್ಚು ಮಳಿಗೆಗಳಲ್ಲಿ ವ್ಯಾಪಾರಕ್ಕಾಗಿ ಪೇಟಿಯಂ ಮೂಲಕ ಹಣ ಪಾವತಿಸುವ ಗ್ರಾಹಕರಿಗೆ ಸೂಕ್ತ ಉತ್ತೇಜನ ನೀಡುವ ಉದ್ದೇಶದಿಂದ ಪೇಟಿಯಂ ಕ್ಯಾಷ್‍ಬ್ಯಾಕ್ ಡೇಸ್ ಸಂಭ್ರಮವನ್ನು ಒಂದು ವಾರಾದ್ಯಂತ ಆಚರಿಸುತ್ತಿದ್ದೇವೆ ಎಂದು ಕಂಪನಿಯ ಸಿಒಒ ಕಿರಣ್ ವಸಿರೆಡ್ಡಿ ತಿಳಿಸಿದರು.

ಊಬರ್, ಬಿಗ್‍ಬಜಾರ್, ಝೊಮಾಟೋ, ಸ್ಪೆನ್ಸಸ್, ಚಾಯೋಸ್, ರಿಲಯನ್ಸ್ ಫ್ರೆಶ್ ಸೇರಿದಂತೆ ವಿವಿಧೆಡೆ ಪೇಟಿಯಂ ಕ್ಯಾಷ್‍ಬ್ಯಾಕ್ ಸೌಲಭ್ಯ ಒದಗಿಸಲಾಗುತ್ತಿದ್ದು, ಈ ಸೌಲಭ್ಯ ಬೃಹತ್‍ಮಳಿಗೆಗಳು, ರೆಸ್ಟೋರೆಂಟ್, ಔಷಧಿ ಅಂಗಡಿ, ಪೆಟ್ರೋಲ್ ಬಂಕ್, ಹಾಲಿನ ಬೂತ್ ಮತ್ತು ಚಿಲ್ಲರೆ ಮಳಿಗೆಗಳಲ್ಲೂ ಗ್ರಾಹಕರಿಗೆ ಅವಕಾಶ ಮಾಡಿಕೊಡಲಾಗಿದೆ.

ಪೇಟಿಯಂನೊಂದಿಗೆ ಸಹಭಾಗಿತ್ವ ಸಾಧಿಸಿ ವ್ಯಾಪಾರ ವಹಿವಾಟನ್ನು ಹೆಚ್ಚು ನಡೆಸುವಂತೆ ಮಾಡುವುದು ನಮ್ಮ ಆಶಯ.100ಕ್ಕೂ ಹೆಚ್ಚು ಮುಂಚೂಣಿ ಬ್ರಾಂಡ್‍ಗಳು ಕೈ ಜೋಡಿಸಿದ್ದು, ದೇಶಾದ್ಯಂತ ಹೆಚ್ಚಿನ ಜನರು ಪೇಟಿಯಂ ಮೂಲಕ ಪಾವತಿಸಲು ಇಷ್ಟಪಡುತ್ತಿದ್ದಾರೆ ಎಂದು ಹೇಳಿದರು.

ಆನ್‍ಲೈನ್ ಪಾವತಿಯೇ ಇರಲಿ, ದೊಡ್ಡ ಮಳಿಗೆಯಿಂದ ಹಿಡಿದು ಸಣ್ಣಪುಟ್ಟ ಮಳಿಗೆಗಳವರೆಗೂ ಗ್ರಾಹಕರಿಗೆ ಲಾಭ ಸಿಗುವಂತೆ ಮಾಡುವುದು ನಮ್ಮ ಗುರಿ. ಪೇಟಿಯಂ ಕ್ಯಾಷ್‍ಬ್ಯಾಕ್ ಡೇಸ್ ಅವಧಿಯಲ್ಲಿ ಅಂದರೆ ಡಿ.12 ರಿಂದ 16ರವರೆಗೆ ನಡೆಯುವ ಈ ಕ್ಯಾಷ್‍ಬ್ಯಾಕ್ ಕಾಲಾವಧಿಯಲ್ಲಿ ಬಿಗ್‍ಬಜಾರ್ ಮಳಿಗೆಗಳಲ್ಲಿ 2 ಸಾವಿರ ರೂ. ಖರೀದಿಗೆ 200ರೂ., ಸೆಂಟ್ರಲ್ ಮಳಿಗೆಗಳಲ್ಲಿ ಕನಿಷ್ಠ 2500ರೂ. ಖರೀದಿಗೆ 300 ರೂ.ಕ್ಯಾಷ್‍ಬ್ಯಾಕ್ ಸೌಲಭ್ಯ.ಅದೇ ರೀತಿ ವಿವಿಧ ಮಳಿಗೆಗಳಲ್ಲಿ ರಿಯಾಯ್ತಿ ಪ್ರಕಟಿಸಲಾಗಿದೆ ಎಂದು ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ