ಕಾಳಿನದಿ ಬಳಿ ಯಾವುದೇ ಮದ್ಯ ಮಾರಾಟಕ್ಕೆ ಅನುಮತಿ ನೀಡಿಲ್ಲ ಎಂದ ಸಿ.ಎಂ

ಬೆಳಗಾವಿ(ಸುವರ್ಣಸೌಧ), ಡಿ.14- ಕಾರವಾರ ತಾಲ್ಲೂಕಿನ ಕಾಳಿನದಿ ಬಳಿ ಬಿಯರ್ ಸೇರಿದಂತೆ ಯಾವುದೇ ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಗೆ ತಿಳಿಸಿದರು.

ಶಾಸಕರಾದ ರೂಪಾಲಿನಾಯಕ್ ಅವರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಬಿಯರ್ ಮಾರಾಟ ಸೇರಿದಂತೆ ಯಾವುದೇ ರೀತಿಯ ಮದ್ಯ ಮಾರಾಟಕ್ಕೆ ಸಂಘಟಕರು ಯಾವುದೇ ಅನುಮತಿ ಕೇಳಲಿಲ್ಲ. ವೈನ್ ಮೇಳ ಆಯೋಜಿಸಲು ಸಂಘಟಕರು ಅನುಮತಿ ಕೋರಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಮಾತನಾಡಿದ ರೂಪಾಲಿನಾಯಕ್, ಕಾರವಾರ ತಾಲ್ಲೂಕಿನ ಕಾಳಿನದಿ ಬಳಿ ಬಿಯರ್ ಮೇಳ ಆಯೋಜಿಸಲಾಗಿದೆ.ಇದಕ್ಕೂ ಸರ್ಕಾರ ಅನುಮತಿಕೊಟ್ಟಿದೆಯೇ ಎಂದು ಹೇಳುವ ಮೂಲಕ ಸದನದ ಗಮನ ಸೆಳೆದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ಕಾಳಿನದಿ ಬಳಿ ವೈನ್‍ಮೇಳ ಮಾಡುವುದನ್ನು ಬಿಟ್ಟು ಉದ್ಯಮಿಗಳಿಗೆ ಅನುಕೂಲವಾಗುವ ಬಿಯರ್ ಮೇಳ ಮಾಡುತ್ತಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದ ಅಲ್ಲಿಯ ವಾತಾವರಣ ಹದಗೆಡುತ್ತದೆ ಎಂಬುದು ಅವರ ಆತಂಕ.ಅದಕ್ಕೆ ಸರ್ಕಾರ ಉತ್ತರ ನೀಡಬೇಕೆಂದು ಸಲಹೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ