
ಬೆಂಗಳೂರು, ಡಿ.14- ಕೋಟ್ಯಂತರ ರೂ.ವಂಚನೆ ಆರೋಪ ಎದುರಿಸುತ್ತಿರುವ ಆ್ಯಂಬಿಡೆಂಟ್ ಮಾರ್ಕೆಟಿಂಗ್ ಕಂಪೆನಿಯ ನಿರ್ದೇಶಕ ಸೈಯದ್ ಫರೀದ್ ಅಹಮದ್ ಮತ್ತು ಆತನ ಕುಟುಂಬ ಸದಸ್ಯರ ಹೆಸರಿನಲ್ಲಿರುವ ಸ್ಥಿರ ಮತ್ತು ಚರಾಸ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಆ್ಯಂಬಿಡೆಂಟ್ ಕಂಪೆನಿಯ ನಿರ್ದೇಶಕರಾದ ಸೈಯದ್ ಫರೀದ್ ಅಹಮ್ಮದ್, ಸೈಯದ್ ಅಫಾಕ್ ಅಹಮ್ಮದ ಹಾಗೂ ಅವರ ಕುಟುಂಬ ಸದಸ್ಯರ ಹೆಸರಿನಲ್ಲಿರುವ ಆಸ್ತಿಗಳ ಬಗ್ಗೆ ಸಾರ್ವಜನಿಕರಿಗೆ ನಿರ್ದಿಷ್ಟ ಮಾಹಿತಿ ಇದ್ದಲ್ಲಿ ಪ್ರಕರಣ ತನಿಖಾಧಿಕಾರಿ ಬಿ.ಬಾಲರಾಜು ಅವರ ಮೊಬೈಲ್ ನಂಬರ್ 9480801030ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ದ ಕರ್ನಾಟಕ ಪೆÇ್ರಟೆಷನ್ ಆಫ್ ಇಂಟರೆಸ್ಟ್ ಆಫ್ ಡೆಪಾಸಿಟರ್ ಇನ್ ಫೈನಾನ್ಷಿಯಲ್ ಎಸ್ಮಾಬ್ಲಿಶ್ಮೆಂಟ್ ಆಕ್ಟ್ 2004ಅನ್ನು ಅಳವಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಆರೋಪಿ ಫರೀದ್ ಮತ್ತು ಅವರ ಕುಟುಂಬ ಸದಸ್ಯರು ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಇತರರ ಸ್ಥಿರ, ಚರಾಸ್ತಿಗಳನ್ನು ಅಲಾಚ್ಮೆಂಟ್ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಆ್ಯಂಬಿಡೆಂಟ್ ಪ್ರಕರಣದಲ್ಲಿ ಸರ್ಕಾರ ನೇಮಕ ಮಾಡಿರುವ ಉತ್ತರ ತಾಲ್ಲೂಕು ವಿಶೇಷ ಅಧಿಕಾರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.