ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ ಲೈಂಗಿಕ ಕಿರುಕುಳ: ಭಾರತದ ಐಟಿ ಎಂಜಿನಿಯರ್ ಗೆ 9ವರ್ಷ ಜೈಲು ಶಿಕ್ಷೆ ವಿಧಿಸಿದ ಅಮೆರಿಕ ನ್ಯಾಯಾಲಯ

ವಾಷಿಂಗ್ಟನ್: ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆಪಾದನೆಗಾಗಿ ಭಾರತದ ಐಟಿ ಎಂಜಿನಿಯರ್‍ರೊಬ್ಬರಿಗೆ ಅಮೆರಿಕ ನ್ಯಾಯಾಲಯೊಂದು ಒಂಭತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಪ್ರಭು ರಾಮಮೂರ್ತಿ ಜೈಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಟೆಕ್ಕಿ. 2015ರಲ್ಲಿ ಎಚ್-1ಬಿ ವೀಸಾ ಮೇಲೆ ಅಮೆರಿಕಕ್ಕೆ ಬಂದಿದ್ದ ಅವರ ಲೈಂಗಿಕ ಕಿರುಕುಳ ಸಾಬೀತಾದ ಹಿನ್ನಲೆಯಲ್ಲಿ ಡೆಟ್ರಾಯಿಟ್ ನಗರದ ಫೆಡರಲ್ ಕೋರ್ಟ್ ಪ್ರಭು ಅವರಿಗೆ ಒಂಭತ್ತು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.

ಜನವರಿ 3ರಂದು ಲಾಸ್‍ವೆಗಾಸ್‍ನಿಂದ ಡೆಟ್ರಾಯಿಟ್‍ಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿತ್ತು. ತಮ್ಮ ಪಕ್ಕದ ಆಸನದಲ್ಲಿದ್ದ ಮಹಿಳೆಯೊಬ್ಬರು ನಿದ್ರಿಸುತ್ತಿದ್ದಾಗ ಪ್ರಭು, ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದರು. ಈ ಕೃತ್ಯ ನಡೆದಾಗ ಇನ್ನೊಂದು ಪಾಶ್ವದ ಆಸನದಲ್ಲಿ ಪ್ರಭು ಪತ್ನಿಯೂ ಇದ್ದರು.

US-Based Indian Techie Gets 9 Years In Jail For Sex Assault On Plane

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ