ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿದ್ದ ಉರ್ಜಿತ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕೇಂದ್ರ ಸರಕಾರ ಮತ್ತು ಆರ್ಬಿಐ ಮಧ್ಯೆ ಹಣಕಾಸು ನೀತಿ ಮತ್ತು ಸಾಲ ನೀಡಿಕೆ ನಿಯಮಗಳ ಕುರಿತು ಆರಂಭಗಾಗಿದ್ದ ಹಗ್ಗಜಗ್ಗಾಟ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ ಎನ್ನಲಾಗುತ್ತಿದ್ದ ಬೆನ್ನಲ್ಲೇ ಉರ್ಜಿತ್ ಪಟೇಲ್ ರಾಜೀನಾಮೆ ನೀಡಿರುವುದು ಕೇಂದ್ರ ಸರಕಾರಕ್ಕೆ ಮುಜುಗರ ಉಂಟು ಮಾಡಿದೆ.
ವೈಯಕ್ತಿಕ ಕಾರಣಕ್ಕೆ ಹುದ್ದೆಯಿಂದ ಕೆಳಗಿಳಿಯುತ್ತಿದ್ದೇನೆ. ಹಾಗೂ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜೀನಾಮೆ ಸ್ವೀಕರಿಸುವಂತೆ ಉರ್ಜಿತ್ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಕಳೆದ ತಿಂಗಳು ಆರ್ಬಿಐ ಮತ್ತು ಕೇಂದ್ರದ ಮಧ್ಯೆ ಹಲವು ಸುತ್ತಿನ ಸಂಧಾನ ಸಭೆ ನಡೆದು ಒಂದು ಹಂತದಲ್ಲಿ ಆರ್ಬಿಐ ಕೇಂದ್ರದ ಬೇಡಿಕೆಗೆ ಸಮ್ಮತಿಸಿ ಹಣಕಾಸು ಮತ್ತು ಸಾಲ ನೀಡುವಿಕೆ ನೀತಿಯಲ್ಲಿ ಕೆಲವೊಂದು ಬದಲಾವಣೆ ಮಾಡಿತ್ತು.
Urjit Patel,Resigns,RBI Governor