ತುಮಕೂರು: ಸಿದ್ದಗಂಗಾ ಶ್ರೀಗಳು ಆರೋಗ್ಯವಾಗಿದ್ದಾರೆ ಭಕ್ತರಲ್ಲಿ ಆತಂಕ ಬೇಡ ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ
ಇದೆ ಸಂದರ್ಭದಲ್ಲಿ ಮಠದ ಆವರಣದ ಬಳಿ ಮಾಧ್ಯಮಗಳ ಕ್ಯಾಮರಾ ಮುಂದೆ ಆಗಮಿಸಿದ ಶಿವಕುಮಾರ ಶ್ರೀಗಳೂ ಎಲ್ಲರೂ ಪ್ರಸಾದ ಸ್ವೀಕರಿಸಿದರ ಎಂದು ಕೇಳಿದರು
ಶ್ರೀಗಳಿಗೆ ಸಂಪೂರ್ಣ ಗುಣ ಮುಖರಾಗಲು ನಾಳೆ ಚೆನೈನ ರೇಲಾ ಇನ್ಸೂಟ್ಯೂಟ್ ಮತ್ತು ಮೆಡಿಕಲ್ ಸೆಂಟರ್ ಗೆ ಶಿಪ್ಟ್ ಮಾಡುತ್ತೇವೆ ಅಲ್ಲಿನ ಖ್ಯಾತ ವೈದ್ಯರಾದ ಡಾ|| ರೆಲಾರಿಂದ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ ಎಂದರು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರಾದ ಡಾ. ರವೀಂದ್ರ ಮಾತನಾಡಿ ಸ್ಟಂಟ್ ಅಳವಡಿಕೆಯಿಂದ ಪದೆ ಪದೆ ಸೊಂಕು ಆಗುತ್ತಿದೆ ಇದಕ್ಕೆ ಶಾಶ್ವತ ಪರಿಹಾರ ಮಾಡುವ ಉದ್ದೇಶದಿಂದ ಚೆನೈನಲ್ಲಿ ಆಧುನಿಕವಾಗಿರುವ ರೇಲಾ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ದರಿಸಿದ್ದೇವೆ ಎಂದರು