ಆಸಿಸ್ ವೇಗಕ್ಕೆ ತತ್ತರಿಸಿದ ಕೊಹ್ಲಿ ಪಡೆ: ಟೀಂ ಇಂಡಿಯಕ್ಕೆ ಪೂಜಾರ ಆಸರೆ

ಅಡಿಲೇಡ್: ಆಸಿಸ್ ವೇಗಕ್ಕೆ ತತ್ತರಿಸಿದ ಹೊರತಾಗಿಯೂ ತಂಡದ ಟೆಸ್ಟ್ ಸ್ಪಶಲಿಸ್ಟ್ ಚೇತೇಶ್ವರ ಪೂಜಾರ ಅವರ ಶತಕ ನೆರವಿನಿಂದ ಟೀಂಇಂಡಿಯಾ 9 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿದೆ.
ಅಡಿಲೇಡ್‍ನಲ್ಲಿ ಆರಂಭವಾದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ತಂಡದ ಓಪನರ್‍ಗಳಾದ ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ಮುರಳಿ ವಿಜಯ್‍ಒಳ್ಳೆಯ ಓಪನಿಂಗ್ ಕೊಡುವಲ್ಲಿ ಎಡವಿದ್ರು. ರಾಹುಲ್ ಹೆಜ್ಲ್‍ವುಡ್‍ಗೆ ವಿಕೆಟ್ ಒಪ್ಪಿಸಿದ್ರೆ. ಮುರಳಿ ವಿಜಯ್ 11, ನಾಯಕ ವಿರಾಟ್ ಕೊಹ್ಲಿ 3, ಅಜಿಂಕ ್ಯ ರಹಾನೆ 13 ಬೇಗನೆ ಪೆವಿಲಿಯನ್‍ಸೇರಿದ್ರು. ಮಧ್ಯಮ ಕ್ರಮಾಂಕಕದಲ್ಲಿ ಬಂದ ರೋಹಿತ್ ಶರ್ಮಾ 37, ರಿಷಭ್ ಪಂತ್ 25, ಆರ್.ಅಶ್ವಿನ್ 25 ರನ್ ಗಳಿಸಿ ತಂಡಕ್ಕೆ ನೆರವಾದ್ರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಏಕಾಂಗಿ ಹೋರಾಟ ನಡೆಸಿದ ಚತೇಶ್ವರ ಪೂಜಾರ ಆಕರ್ಷಕ ಶತಕ ಬಾರಿಸಿ ಮಿಂಚಿದ್ರು. ಇದರೊಂದಿಗೆ ಚೇತೇಶ್ವರ ಪೂಜಾರ ಟೆಸ್ಟ್ ನಲ್ಲಿ 16ನೇ ಶತಕ ಬಾರಿಸಿದ ಸಾಧನೆ ಮಾಡಿದರು. ದಿನದ ಅಂತ್ಯ ಮುಗಿಯಲು ಕೆಲವೇ ನಿಮಿಷ ಬಾಕಿ ಇರುವಾಗ 123 ರನ್ ಗಳಿಸಿದ್ದಾಗ ಚೇತೇಶ್ವರ ಪೂಜಾರ ರನೌಟ್ ಬಲೆಗೆ ಬಿದ್ದರು. ಪೂಜಾರ 246 ಎಸೆತ ಎದುರಿಸಿ 7 ಬೌಂಡರಿ 2 ಸಿಕ್ಸರ್ ಬಾರಿಸಿ 123 ರನ್ ಗಳಿಸಿದ್ರು. ಕೊನೆಯಲ್ಲಿ ಮೊದಲ ದಿನ ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ