64 ಸಾವಿರ ಕೋಟಿ ರೈತರ ಸಾಲ ಮನ್ನಾ ಯೋಜನೆಗೆ ನಾಳೆ ಸಿಎಂ ಚಾಲನೆ

Bengaluru: Karnataka Chief Minister H D Kumaraswamy greets Co-ordination Committee Chairman Siddaramaiah, as his Deputy Parameshwara(R), MP K C Venugopal(C) look on during a press conference, in Bengaluru on Friday, June 1, 2018.(PTI Photo/Shailendra Bhojak)(PTI6_1_2018_000127B)

ದೊಡ್ಡಬಳ್ಳಾಪುರ: ಸಮ್ಮಿಶ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ರೈತರ ಸಾಲ ಮನ್ನಾ, ಋಣಭಾರಮುಕ್ತ ಪತ್ರ ವಿತರಣೆಯ ಮೂಲಕ ಸಾಲದ ಸುಳಿಯಲ್ಲಿರುವ ರೈತರ ಸಾಲ ಮನ್ನಾ ಮಾಡುವ ಯೋಜನೆಗೆ ಸಿಎಂ ಕುಮಾರಸ್ವಾಮಿ ನಾಳೆ ನಗರದಲ್ಲಿ ಚಾಲನೆ ನೀಡಲಿದ್ದಾರೆ

ಉಪ ಮಖ್ಯಮಂತ್ರಿ ಪರಮೇಶ್ವರ್ ಮತ್ತು ಸಂಪುಟದ ಸಚಿವರ ಉಪಸ್ಥಿತಿಯಲ್ಲಿ ಸುಮಾರು 64 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡುವ ಯೋಜನೆಗೆ ನಾಳೆ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಚಾಲನೆ ನೀಡಲಿದ್ದಾರೆ.

ದೊಡ್ಡಬಳ್ಳಾಪುರ ಮತ್ತು ಸೇಡಂ ತಾಲೂಕನ್ನು ಪ್ರಾಯೋಗಿಕವಾಗಿ ತೆಗೆದುಕೊಂಡಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಹಕಾರ ಸಂಘಗಳಲ್ಲಿ ಸಾಲ ಪಡೆದಿದ್ದ ಸುಮಾರು 17,300 ರೈತರು ಈ ಯೋಜನೆಯ ಲಾಭ ಪಡೆಯಲ್ಲಿದ್ದಾರೆ. ವಾಣಿಜ್ಯ ಬ್ಯಾಂಕ್​ನಲ್ಲಿಯೂ ಸಹ ಸಾಕಷ್ಟು ರೈತರು ಸಾಲ ಪಡೆದಿದ್ದಾರೆ. ರೈತರ ಸಾಲ ಮನ್ನಾ ಪ್ರಕ್ರಿಯೆಯ ಡಾಟಾ ಎಂಟ್ರಿ ಕೆಲಸ ಮುಗಿದಿದ್ದು, ಸಹಕಾರಿ ಸಂಘ ಮತ್ತು ವಾಣಿಜ್ಯ ಬ್ಯಾಂಕ್​ನಲ್ಲಿರುವ ಸಾಲ ಮನ್ನಾ ಮಾಡಲಾಗುವುದು. ನಾಳೆ ನಡೆಯುವ ಬೃಹತ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಿಎಂ ಋಣಭಾರಮುಕ್ತ ಪತ್ರ ವಿತರಣೆ ಮಾಡಿಲಿದ್ದಾರೆ. ಈ ಮೂಲಕ ಸಮ್ಮಿಶ್ರ ಸರ್ಕಾರ ನುಡಿದಂತೆ ನಡೆದುಕೊಂಡಿದೆಯೆಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ