ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕೃಷ್ಣಮೂರ್ತಿ ಸುಬ್ರಹ್ಮಣ್ಯನ್ ನೇಮಕ

ನವದೆಹಲಿ: ಮುಂದಿನ ಮೂರು ವರ್ಷಕ್ಕಾಗಿ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರ ಹುದ್ದೆಗೆ ಡಾ. ಕೃಷ್ಣಮೂರ್ತಿ ಸುಬ್ರಹ್ಮಣ್ಯನ್ ಅವರನ್ನು ನೇಮಕ ಮಾಡಿ ಇಂದು (ಶುಕ್ರವಾರ) ಸರ್ಕಾರ ಆದೇಶ ಹೊರಡಿಸಿದೆ.
ಹೈದರಾಬಾದ್ ನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ನಲ್ಲಿ ಶಿಕ್ಷಕರಾಗಿರುವ ಸುಬ್ರಹ್ಮಣ್ಯನ್ ಅಮೆರಿಕಾದ ಚಿಕಾಗೋ ಬೂತ್ ಸ್ಕೂಲ್ ಆಓ ಬ್ಯುಸಿನೆಸ್ ನಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ.
ಬ್ಯಾಂಕಿಂಗ್, ಸಾಂಸ್ಥಿಕ ಆಡಳಿತ ಮತ್ತು ಆರ್ಥಿಕ ನೀತಿಗಳ ನಿರೂಪಣೆಯಲ್ಲಿ ಪರಿಣಿತರಾಗಿರುವ ಇವರು ದೇಶದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್ ಅವರಿಂದ ತೆರವಾದ ಸ್ಥಾನದ ಉಸ್ತುವಾರಿ ವಹಿಸಲಿದ್ದಾರೆ. ಅರವಿಂದ್ ಅವರು ಇದೇ ಜೂನ್ 20ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ