ನವದೆಹಲಿ: ರಸ್ತಗಳು ದೇಶದ ಆಸ್ತಿ ಅಂತಹದರಲ್ಲಿ ರಸ್ತೆಗಳ ಗುಣಮಟ್ಟದ ವಿಷಯದಲ್ಲಿ ನಾವು ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ರಸ್ತೆಗಳು ಹದಗೆಟ್ಟ ಸ್ಥಿತಿಯಲ್ಲಿ ಕಂಡು ಬಂದರೆ, ನಿರ್ಮಾಣ ಗುತ್ತಿಗೆಗಾರರ ಮೇಲೆ ಬುಲ್ಡೋಜರ್ ಹರಿಯಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ.
ಹೆದ್ದಾರಿ ನಿರ್ಮಾಣಕ್ಕಾಗಿ ಈಗಾಗಲೇ ಹೆಚ್ಚುಕಡಿಮೆ 10 ಲಕ್ಷ ಕೋಟಿ ಗುತ್ತಿಗೆ ನೀಡಿದ್ದೇವೆ. ಈ ಗುತ್ತಿಗೆ ಪಡೆಯಲು ಯಾವುದೇ ಟೆಂಡರ್ ದಾರರು ಲಾಬಿ ಮಾಡಲು ದೆಹಲಿಗೆ ಬಂದಿಲ್ಲ. ಅನೇಕ ದೊಡ್ಡ ದೊಡ್ಡ ಟೆಂಡರ್ ನೀಡಲಾಗಿದ್ದು, ಇವರುಗಳು ಏನಾದರೂ ರಸ್ತೆ ಗುಣಮಟ್ಟ ನಿರ್ವಹಣೆ ವಿಷಯದಲ್ಲಿ ರೆ ಯಾವುದೇ ಹೊಂದಾಣಿಕೆಯನ್ನು ಮಾಡಿಕೊಳ್ಳುವುದಿಲ್ಲ. ಅವರ ಮೇಲೆ ಬುಲ್ಡೋಜರ್ ಹತ್ತಿಸುತ್ತೇವೆ ಎಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಅವರು ಎಚ್ಚರಿಕೆ ನೀಡಿದ್ದಾರೆ.
ನವಿ ಮುಂಬೈನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಸ್ತೆ ನಿಲ್ದಾಣವನ್ನು ವೆನಿಸ್ ವಿಮಾನ ನಿಲ್ದಾಣದ ಮಾರ್ಗದಲ್ಲಿ ರಸ್ತೆಗಳಿಂದ ಹೊರತುಪಡಿಸಿ ಜಲಮಾರ್ಗಗಳ ಮೂಲಕ ಸಂಪರ್ಕಿಸಲಾಗುವುದು. ಈ ಮಾರ್ಗದ ಮೂಲಕ ಕೇವಲ 20 ನಿಮಿಷದಲ್ಲಿ ಜನರು ವಿಮಾನನಿಲ್ದಾಣಕ್ಕೆ ತಲುಪಬಹುದು.