ಸಿದ್ದಗಂಗಾ ಶ್ರೀಗಳು ಕ್ಷೇಮ : ಹೆಚ್ಚಿನ ಚಿಕಿತ್ಸೆಗೆ ಚೆನ್ನೈಗೆ ರವಾನೆ

ತುಮಕೂರು: ಕೆಲ ದಿನಗಳಿಂದ ಆರೋಗ್ಯದಲ್ಲಿ ಏರುಪೇರು ಕಾಣುತ್ತಿರುವ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದ್ದು, ಇಂದು ಹೆಚ್ಚಿನ ಚಿಕಿತ್ಸೆಗೆ ಚೆನ್ನೈಗೆ ಕರೆದೊಯ್ಯಲಾಗುವುದು.

ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ ಎನ್ನಲಾಗಿದೆ.  ಆದರೂ ಶ್ರೀಗಳು ಸಂಪೂರ್ಣವಾಗಿ ಗುಣಮುಖರಾಗಲು ಚೆನ್ನೈಗೆ ರವಾನೆ ಮಾಡಿ ಅಲ್ಲಿಯೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಯೋಜನೆ ಇದೆ. ಇದಕ್ಕೆ ಪುಷ್ಟಿ ಕೊಡುವಂತೆ ಸಿದ್ದಗಂಗಾ ಮಠದ ಆವರಣದಲ್ಲಿ ಐಸಿಯು ಆ್ಯಂಬುಲೆನ್ಸ್ ವಾಹನವನ್ನು ತಂದು ನಿಲ್ಲಿಸಲಾಗಿದೆ.

ಚೆನ್ನೈನಿಂದ ನುರಿತ ಅರವಳಿಕೆ ತಜ್ಞ ಡಾ. ಎಲ್.ಎನ್. ಕುಮಾರ್ ನೇತೃತ್ವದಲ್ಲಿ ಮೂವರು ವೈದ್ಯರ ತಂಡವು ತುಮಕೂರಿನಲ್ಲಿರುವ ಮಠಕ್ಕೆ ಬಂದು ಶ್ರೀಗಳ ಆರೋಗ್ಯವನ್ನು ಖುದ್ದಾಗಿ ಪರಿಶೀಲಿಸಿದೆ.  ಬಿಜಿಎಸ್ ಆಸ್ಪತ್ರೆಯ ವೈದ್ಯರಾದ ಡಾ. ಪರಮೇಶ್ ಹಾಗೂ ಡಾ. ರವೀಂದ್ರ ಅವರು ನಿನ್ನೆ ಬೆಳಗ್ಗೆ ಚೆನ್ನೈಗೆ ಹೋಗಿ ಅಲ್ಲಿನ ನುರಿತ ವೈದ್ಯರೊಂದಿಗೆ ಶ್ರೀಗಳ ಆರೋಗ್ಯ ಸ್ಥಿತಿಯ ಬಗ್ಗೆ ವಿವರ ನೀಡಿ ಸಮಾಲೋಚನೆ ನಡೆಸಿದ್ದರು. ಆ ಬಳಿಕವೇ, ಡಾ. ಎಲ್.ಎನ್. ಕುಮಾರ್ ಮತ್ತವರ ತಂಡವನ್ನು ತುಮಕೂರಿಗೆ ಕರೆತಂದು ಖುದ್ದಾಗಿ ಪರಿಶೀಲಿಸುವ ನಿರ್ಧಾರಕ್ಕೆ ಬರಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ