
ಬೆಂಗಳೂರು,ಡಿ.7- ತಮ್ಮ ವಿರುದ್ಧದ ಟೀಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನಟಿ ಹಾಗೂ ಮಾಜಿ ಸಂಸದೆ ರಮ್ಯ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ಸರ್ದಾರ್ ಪ್ರತಿಮೆ ಕೆಳಗೆ ನಿಂತಿದ್ದ ಪೊಟೋವನ್ನು ಟ್ವೀಟ್ ಮಾಡಿದ್ದ ರಮ್ಯಾ, ಹಕ್ಕಿಯ ಹಿಕ್ಕೆ ಎಂದು ವ್ಯಂಗ್ಯವಾಡಿದ್ದರು.ಈ ಟ್ವೀಟ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು.
ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಕೂಡ ಅಪ್ಲೋಡ್ ಮಾಡಿರುವ ರಮ್ಯಾ, ತಾವು ಚಿಕಿತ್ಸೆ ಪಡೆದ ಬಳಿಕ ಸದ್ಯ ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ.
ಸದಾ ಒಂದಿಲ್ಲೊಂದು ವಿವಾದಕ್ಕೀಡಾಗುತ್ತಿರುವ ನಟಿ ರಮ್ಯಾ ರೆಬಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನಕ್ಕೂ ಆಗಮಿಸ್ದೆ ಅಂಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದರು.
ಈ ಹಿನ್ನೆಲೆಯಲ್ಲಿ ಮಂಡ್ಯದ ವಿದ್ಯಾನಗರದಲ್ಲಿರುವ ಅವರ ಬಾಡಿಗೆ ಮನೆಗೆ ಪೊಲೀಸ್ ಭದ್ರತೆ ಕೂಡ ಒದಗಿಸಲಾಗಿತ್ತು.ರಾತ್ರೋರಾತ್ರಿ ಮನೆ ಖಾಲಿ ಮಾಡಿದ್ದ ರಮ್ಯಾ ಹಲವು ಟೀಕಾಪ್ರಹಾರಗಳು ಕೇಳಿಬಂದಿದ್ದವು.
ಇದೀಗ ತಮ್ಮ ಟ್ವೀಟ್ನಲ್ಲಿ ನನ್ನ ವಿರುದ್ದ ಟೀಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.