ಬೆಂಗಳೂರು, ಡಿ.6- ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಳ್ಳುವ ಪ್ರಕರಣವೀಗ ಹೊಸ ತಿರುವು ಪಡೆದುಕೊಂಡಿದೆ.
ಕಲುಷಿತ ನೊರೆಯಿಂದಾಗಿ ಕೆರೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿತ್ತು ಎಂಬ ಚರ್ಚೆಗೆ ಈಗ ತೆರೆ ಬಿದ್ದಿದೆ.ತ್ಯಾಜ್ಯ ವಯರ್ಗಳನ್ನು ಸುಡಲು ಕೆಲ ಕಿಡಿಗೇಡಿಗಳು ಕೆರೆ ಅಂಗಳದಲ್ಲಿ ಬೆಂಕಿ ಹಚ್ಚುತ್ತಿದ್ದ ಪ್ರಕರಣವೀಗ ಬೆಳಕಿಗೆ ಬಂದಿದೆ. ಇದರಿಂದ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿತ್ತು ಎಂದು ತಿಳಿದುಬಂದಿದೆ.
ಈ ಕಿಡಿಗೇಡಿಗಳು ತ್ಯಾಜ್ಯ ವಯರ್ಗಳನ್ನು ಕೆರೆಯಲ್ಲಿ ಸುಡುತ್ತಿದ್ದಾಗಲೇ ಬಿಬಿಎಂಪಿಯ ಮಾರ್ಷಲ್ಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.ಕತ್ತಲಾದರೆ ಸಾಕು, ವಯರ್ಗಳನ್ನು ಸುಡಲು ಬೆಂಕಿ ಹಚ್ಚುತ್ತಿದ್ದರು.
ಬೆಂಕಿ ಹಚ್ಚುತ್ತಿದ್ದ ನಾಲ್ವರು ಕಿಡಿಗೇಡಿಗಳನ್ನು ಪಾಲಿಕೆ ಮಾರ್ಷಲ್ಗಳು ವಶಕ್ಕೆ ಪಡೆದಿದ್ದು, ಮುಂದಿನ ವಿಚಾರಣೆ ನಡೆಯುತ್ತಿದೆ.