ಭಟ್ಟರಹಳ್ಳಿ ಬಳಿ ಅಪಘಾತ, ಘಟನೆಯಲ್ಲಿ ಬೈಕ್ ಸವಾರನ ಸಾವು

ಬೆಂಗಳೂರು, ಡಿ.6- ಕೆಆರ್‍ಪುರಂನ ಹಳೆ ಮದ್ರಾಸ್ ರಸ್ತೆಯ ಭಟ್ಟರಹಳ್ಳಿಯ ಬಳಿ ಸ್ಕೂಟರ್‍ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಬಾಗೇಪಲ್ಲಿ ಮೂಲದ ಚಂದ್ರಶೇಖರ್(28)ಮೃತಪಟ್ಟ ಸ್ಕೂಟರ್ ಸವಾರ.
ಮಾರ್ನಿಂಗ್ ಸ್ಟಾರ್ ಟ್ರಾವೆಲ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಕೆಆರ್‍ಪುರಂನಿಂದ ಹೊಸಕೋಟೆಯ ಸ್ನೇಹಿತರ ಮನೆಗೆ ಹೋಂಡಾ ಆಕ್ಟೀವಾದಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಅಪಘಾತವೆಸಗಿದ ಚಾಲಕ ಸ್ಥಳದಲ್ಲೇ ಕಾರು ಬಿಟ್ಟು ಪರಾರಿಯಾಗಿದ್ದು, ಇದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕೆಆರ್ ಪುರಂ ಸಂಚಾರಿ ಪೆÇಲೀಸರು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ