ತೆಲಂಗಾಣ ವಿಧಾನಸಭಾ ಚುನಾವಣೆ: ನಾಯಕನ ಗೆಲುವಿಗಾಗಿ ನಾಲಿಗೆಯನ್ನು ತುಂಡರಿಸಿ ಹುಂಡಿಗೆ ಹಾಕಿದ ವ್ಯಕ್ತಿ

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಚುನಾವಣಾ ಕಣ ರಾಜಕೀಯ ನಾಯಕರಿಗೆ ರಣಕಣವಾಗಿ ಪರಿಣಮಿಸಿದೆ. ಒಂದೆಡೆ ರಾಜಕೀಯ ಪಕ್ಷಗಳು ಮತದಾರರ ಓಲೈಕೆಗಾಗಿ ಅಂತಿಮ ಹಂತದ ಕಸರತ್ತುಗಳನ್ನು ಮಾಡುತ್ತಿದ್ದರೆ, ಇನ್ನೊಂದೆಡೆ ರಾಜಕೀಯ ನಾಯಕರ ಪರವಾದ ಹುಚ್ಚು ಅಭಿಮಾನದ ಪರಾಕಾಷ್ಟೇಗಳೂ ಮಿತಿ ಮೀರಿದೆ.

ಚುನಾವಣೆಯಲ್ಲಿ ತಮ್ಮ ನಾಯಕರು ಗೆಲಲ್ಲಿ ಎಂದು ಹೋಮ, ಹವನ, ಪೂಜೆ ಮಾಡುವುದನ್ನು ನೋಡಿದ್ದೇವೆ ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ನಾಯಕ ಗೆಲ್ಲಲೆಂದು ನಾಲಿಗೆಯನ್ನೇ ಕತ್ತರಿಸಿ ದೇವಾಲಯ ಹುಂಡಿಗೆ ಹಾಕಿದ್ದಾನೆ.

ಆಂಧ್ರಪ್ರದೇಶದ ಪಶ್ಚಿಮ ಗೋಧಾವರಿ ಜಿಲ್ಲೆಯ ಮಹೇಶ್ ಎಂಬಾತ ನಾಲಿಗೆ ತಂಡರಿಸಿ ದೇವರಿಗೆ ಅರ್ಪಿಸಿದ ವ್ಯಕ್ತಿ. ಹೈದ್ರಾಬಾದಿನ ಶ್ರೀನಗರ ಕಾಲೋನಿಯಲ್ಲಿರುವ ವೆಂಕಟೇಶ್ವರ ದೇವಾಲಯದ ಹುಂಡಿಗೆ ನಾಲಿಗೆಯನ್ನು ಹಾಕಿದ್ದಾನೆ.

ಈ ಸಂದರ್ಭದಲ್ಲಿ ಆತ ಪತ್ರವೊಂದನ್ನು ಬರೆದಿಟ್ಟಿದ್ದು, ತೆಲಂಗಾಣ ಹಾಗೂ ಆಂಧ್ರಪ್ರದೇಶ ಎರಡು ರಾಜ್ಯಗಳಲ್ಲಿಯೂ ಪ್ರಾಮಾಣಿಕರಾಗಿರುವ ರಾಜಕಾರಣಿಗಳು ಮುಖ್ಯಮಂತ್ರಿಗಳಾಗಬೇಕು ಎಂದು ಆತ ಬರೆದಿಟ್ಟಿರುವುದಾಗಿ ಬಂಜಾರ ಹಿಲ್ಸ್ ಇನ್ಸ್ ಪೆಕ್ಟರ್ ಗೋವಿಂದ ರೆಡ್ಡಿ ಹೇಳಿದ್ದಾರೆ.

ಘಟನೆ ಬಳಿಕ ಮಹೇಶ್ ಓಸ್ಮಾನಿಯಾ ಆಸ್ಪತ್ರೆಗೆ ದೌಡಾಯಿಸಿದ್ದು, ಚಿಕಿತ್ಸೆ ಪಡೆದಿದ್ದಾನೆ. ಆತನ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

2009ರ ಚುನಾವಣೆ ಸಂದರ್ಭದಲ್ಲೂ ನಾಗೇಶ್ ಇದೇ ರೀತಿ ಮಾಡಿದ್ದ ಎನ್ನಲಾಗಿದೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ. ಎಸ್ . ರಾಜಶೇಖರ ರೆಡ್ಡಿ ಅವರ ನಿಷ್ಠಾವಂತ ಅಭಿಮಾನಿಯಾಗಿದ್ದು, ಅವರ ಗೆಲುವಿಗಾಗಿ ತುಂಡಿಸಿದ ನಾಲಿಗೆಯನ್ನು ಕಾಣಿಕೆಯಾಗಿ ದೇವರಿಗೆ ಹಾಕಿದ್ದ.

telangana electiona,Hyderabad Man Slits Tongue, Puts In Temple Hundi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ