ಬೆಂಗಳೂರು, ಡಿ.6- ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಆಪರೇಷನ್ ಕಮಲ ನಡೆಸಲು ಮುಂದಾದರೆ, ಆಪರೇಷನ್ ಹಸ್ತವೂ ನಡೆಯಲಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಇಂದಿಲ್ಲಿ ಟಾಂಗ್ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್ ಹೇಳಿರವುದರಲ್ಲಿ ಸತ್ಯಾಂಶ ಇದೆ. ಆಪರೇಷನ್ ಕಮಲ ಮಾಡುತ್ತಿರುವುದು ಗೊತ್ತಾಗಿಯೇ ಡಿಸೆಂಬರ್ನಲ್ಲಿ ಧಮಾಕ ಆಗಲಿದೆ ಎಂದು ಹೇಳಿದ್ದಾರೆ. ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಅವರು ಮಾಡಿದ್ದಾರೆ. ಒಂದು ವೇಳೆ ಆಪರೇಷನ್ ಕಮಲ ಮಾಡಿದರೆ ಆಪರೇಷನ್ ಹಸ್ತವೂ ಆಗಲಿದೆ ಎಂದು ಹೇಳಿದರು.
ಯಾವ ಶಾಸಕರೂ ರಾಜೀನಾಮೆ ನೀಡಲು ಅಸಕ್ತರಾಗಿಲ್ಲ. ಏಕೆಂದರೆ ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆ ಎದುರಿಸುವ ಶಕ್ತಿ ಶಾಸಕರಿಗೆ ಇಲ್ಲ ಎಂದರು.
ಇತ್ತೀಚೆಗೆ ನಡೆದ ಲೋಕಸಭೆ ಮತ್ತು ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಿದೆ.ಆಪರೇಷನ್ ಕಮಲದ ಕಿಂಗ್ಪಿನ್ಗಳು ದುಬೈ ಸೇರಿದ್ದಾರೆ.ಅಲ್ಲಿಂದಲೇ ಕಾರ್ಯತಂತ್ರ ರೂಪಿಸುತ್ತಿರಬಹುದು ಎಂದು ಹೇಳಿದರು.
ಎರಡು ಬಾರಿ ಸರ್ಕಾರ ರಚಿಸಲು ಮುಂದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೈ ಸುಟ್ಟುಕೊಂಡಿದ್ದಾರೆ.ಮೂರನೆ ಬಾರಿಯೂ ಪ್ರಯತ್ನಿಸುತ್ತಿದ್ದಾರೆ.ಅವರು ಸುಮ್ಮನೆ ಕೂರುವ ವ್ಯಕ್ತಿಯಲ್ಲ. ಚಿಕಿತ್ಸೆಗಾಗಿ ಜಿಂದಾಲ್ಗೆ ಹೋಗುತ್ತಿದ್ದರು.ಈಗ ಕೇಳಕ್ಕೆ ಹೊಗಿರುವುದು ಅನುಮಾನಕ್ಕೆ ಎಡೆಮಾಡಿದೆ.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಕೇರಳಕ್ಕೆ ಹೋಗುತ್ತದೆ ಎಂದು ಹೇಳುತ್ತಿದ್ದ ಯಡಿಯೂರಪ್ಪನವರೇ ಈಗ ಆಲ್ಲಿಗೆ ಹೋಗಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಬೇಳೂರು ಗೋಪಾಲಕೃಷ್ಣ ಸಣ್ಣ ವ್ಯಕ್ತಿಯೇ…. ಯಡಿಯೂರಪ್ಪ ಅವರ ತರ ಭ್ರಷ್ಟಾಚಾರ ಮಾಡಿದ್ದರೆ ದೊಡ್ಡ ವ್ಯಕ್ತಿ ಆಗಬಹುದಿತ್ತು ಎಂದರು.
ಶೋಭಾ ಕರಂದ್ಲಾಜೆ ಅವರನ್ನು ಎಂಎಲ್ಸಿ ಮಾಡಿದ್ದೆವು.ಆನಂತರ ಅವರು ದೊಡ್ಡವರಾದರು.ಬೇಳೂರು ಕೂಡ ದೊಡ್ಡ ಸ್ಥಾನಕ್ಕೆ ಏರಿದ ನಂತರ ನಾನೇನು ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರ: