ಬೆಳ್ಳಂದೂರು ಕೆರೆ ಮಾಲಿನ್ಯ : ಹಸಿರು ನ್ಯಾಯಪೀಠದಿಂದ ಸರ್ಕಾರಕ್ಕೆ 50 ಕೋಟಿ, ಮತ್ತು ಬಿಬಿಎಂಪಿಗೆ 25 ಕೋಟಿ ದಂಡ

ಬೆಂಗಳೂರು, ಡಿ.6-ಬೆಳ್ಳಂದೂರು ಕೆರೆ ಮಾಲಿನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಸಿರು ನ್ಯಾಯಪೀಠ ಸರ್ಕಾರಕ್ಕೆ 50 ಕೋಟಿ ರೂ. ಹಾಗೂ ಬಿಬಿಎಂಪಿಗೆ 25 ಕೋಟಿ ರೂ. ದಂಡ ವಿಧಿಸಿದೆ.

ದಂಡದ ಮೊತ್ತವನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಬೇಕೆಂದು ಸೂಚಿಸಿದೆ. ಬೆಳ್ಳಂದೂರು ಕೆರೆ ಸಂರಕ್ಷಣೆಗೆ 500 ಕೋಟಿ ರೂ.ಮೀಸಲು ನಿಧಿ ಇಡಬೇಕು ಎಂದು ತನ್ನ ತೀರ್ಪಿನಲ್ಲಿ ಹೇಳಿದೆ.

ಬೆಳ್ಳಂದೂರು ಕೆರೆಯಲ್ಲಿ ರಾಸಾಯನಿಕ ಮಿಶ್ರಣದಿಂದ ಬೆಂಕಿ ಬಿದ್ದು, ಪರಿಸರಕ್ಕೆ ಹಾನಿಯಾಗುತ್ತಿತ್ತು.ಅಲ್ಲದೆ, ಕೆರೆಯಲ್ಲಿ ನೊರೆ ಉಕ್ಕಿ ರಸ್ತೆಗೆ ಹರಿದು ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿತ್ತು.ಈ ಸಂಬಂಧ ಹಸಿರು ನ್ಯಾಯಪೀಠದಲ್ಲಿ ನಡೆದ ವಿಚಾರಣೆಯಲ್ಲಿ 50 ಕೋಟಿ ರೂ.ದಂಡ ವಿಧಿಸಿದೆ. ಅಲ್ಲದೆ, 25 ಕೋಟಿ ರೂ. ದಂಡವನ್ನು ಬಿಬಿಎಂಪಿ ಕಟ್ಟಬೇಕೆಂದು ಸೂಚಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ