ವಿಶ್ವ ಏಡ್ಸ್ ದಿನ

ಡಿಸೆಂಬರ್ 1 ನೇ ದಿನಾಕದಂದು ವಿಶ್ವ ಏಡ್ಸ್ ದಿನ’ವೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಜನರಿಗೆ ಶಿಕ್ಷಣ ಒದಗಿಸುವ ಸಲುವಾಗಿ ಡಿಸೆಂಬರ್ 1 ರಂದು ವಿಶ್ವ ಏಡ್ಸ್ದಿನವಾಗಿ ಆಚರಿಸಲಾಗಿದೆ.

ಹೆಚ್.ಐ.ವಿ( ಹ್ಯೂಮನ್ ಇಮ್ಯೂನೋಡಿಫಿಸಿಯನ್ಸ್ಸಿ ವೈರಸ್) ಎಂಬ ಸೂಕ್ಷರೋಗಾಣುಗಳು ಶರೀರವನ್ನು ಪ್ರವೇಶಿಸಿದ ಕೂಡಲೆ ದೇಹದಲ್ಲಿರುವ ರೋಗಾಣುಗಳಿಂದ ಕಾಪಾಡುವಂತಹ ರೋಗನಿರೋಧಕ ಜೀವಕೋಶದ ಮೇಲೆ ದಾಳಿ ಮಾಡಿ ಬಿಳಿ ರಕ್ತದ ಕಣಗಳಲ್ಲಿರುವಂತಹ ಟಿ- ಹೆಲ್ಪರ್ ಕಣಗಳನ್ನು ನಾಷಮಾಡುತ್ತದೆ. ಈ ಕಾರಣದಿಂದಾಗಿ ಆಗಿಂದಾಗ್ಗೆ ಅನಾರೋಗ್ಯ ಉಂಟಾಗುತ್ತದೆ.

ಹೆಚ್.ಐ.ವಿ ಇಂದ ಪೀಡಿತ ರೋಗಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನಿಡದಿದ್ದಲ್ಲಿ, 10 ರಿಂದ 15 ವರ್ಷದೂಳಗೆ ರೋಗಿಯ ಶರೀರದ ಸಂಪೂರ್ಣ ವ್ಯಾಧಿಕ್ಷಮತ್ವವನ್ನು ಹಾಳುಮಾಡುತ್ತದೆ. ಇದು ರೋಗಿಯ ವಯಸ್ಸು, ಲಿಂಗ, ಶಾರೀರಿಕ ಹಾಗು ಮಾನಸಿಕ ಸ್ವಾಸ್ಥ್ಯಗಳ ಮೇಲೆ ಅವಲಂಬಿಸಿದೆ.

ಇನ್ನು ಏಡ್ಸ್ ಎಂಬುವುದು ಹೆಚ್.ಐ.ವಿ ಹಾಗು ಇನ್ನಿತರ ಹಲವಾರು ಲಕ್ಷಣಗಳಗೂಂಡಿರುವ ಮಾರಕವ್ಯಾದಿ. ಏಡ್ಸ್ ಪೀಡಿತ ವ್ಯಕ್ತಿಯ ಶರೀರದ ವ್ಯಾದಿಕ್ಷಮತ್ವದ ಜೀವಕೋಶಗಳು ಬಹಳ ದುರ್ಬಲವಾಗಿರುವ ಕಾರಣ ಹೆಚ್.ಐ.ವಿ ರೋಗಾಣುಗಳಲ್ಲದೆ ಇನ್ನು ಹಲಾವಾರು ಮಾರಕ ರೋಗಾಗಳನ್ನುಂಟುಮಾಡುವ ಜೀವಕೋಶಗಳ ಮೇಲೆ ದಾಳಿ ಮಾಡಲು ಸಾಧ್ಯವಾಗದೆ, ದೇಹವನ್ನು ಇನ್ನೂ ದುರ್ಬಲ ಹಾಗು ನಿಶ್ಯಕ್ತವನ್ನಾಗಿಸುತ್ತದೆ. ಅಗತ್ಯವಾದ ಚಿಕಿತ್ಸೆಯನ್ನು ಕೂಡಲೆ ನೀಡದಿದ್ದಲ್ಲಿ ಮರಣ ಸಂಭವಿಸಬಹುದಾಗುತ್ತದೆ.

ಪ್ರಸ್ತುತ ಹೆಚ್.ಐ.ವಿ ವ್ಯಾದಿಯನ್ನು ಗುಣಪಡಿಸಲು ಅಸಾಧ್ಯವಾಗಿದ್ದರೂ ಸಹ ಹೆಚ್.ಐ.ವಿ ಪೀಡಿತ ರೋಗಿಗಳು ಕೆಲವು ಆಯುವರ್ೇದ ಔಷದಿಗಳ ಸೇವನೆ ಮಾಡುವುದರಿಂದ ಒಂದು ಹಂತಕ್ಕೆ ಆರೋಗ್ಯಕರವಾದ ಜೀವನ ನೆಡೆಸಲು ಸಾಧ್ಯ. ಆಯುವರ್ೇದ ಔಷದಿಗಳು ಇಮ್ಯುನೊಮಾಡ್ಯುಲೇಟರ್(ರೋಗನಿರೋಧಕ) ಹಾಗು ಓಜೋವೃದ್ಧಿಕರವಾಗಿ ಹೆಚ್.ಐ.ವಿ ಪೀಡಿತರಿಗೆ ಅನುಕೂಲಕರವಾಗಬಹುದು.

ಹೆಚ್.ಐ.ವಿ ಸೋಂಕು ಹರಡಲು ಕಾರಣಗಳು ಈ ಕೆಳಗಿನಂತಿದೆ

  • ಇಗಾಗಲೆ ಹೆಚ್.ಏ.ವಿ ಅಥವ ಏಡ್ಸ್ ನಿಂದ ಬಳಲುತ್ತಿರು ರೋಗಿಯೊಂದಿಗೆ ಕಾಂಡೊಮ್ ಉಪಯೋಗಿಸದೆ ಲೈಂಗಿಕ ಸಂಪರ್ಕ ಮಾಡುವುದರಿಂದ.
  • ಹೆಚ್.ಐ.ವಿ/ಏಡ್ಸ್ ನಿಂದ ಕಲುಷಿತವಾದ ರಕ್ತದ ಸಂಪರ್ಕದಿಂದ.
  • ಹೆಚ್.ಐ.ವಿ/ಏಡ್ಸ್ನಿಂದ ಬಳಲುತ್ತಿರುವ ಮಹಿಳೆಯರು ಗಭರ್ಿಣಿಯರಾದಾಗ, ಪ್ರಸವದ ಸಮಯದಲ್ಲಿ ಹಾಗು ಮಗುವಿಗೆ ಎದೆ ಹಾಲು ಕೊಡುವಾ ಸಂದರ್ಭದಲ್ಲಿ ಮಗುವಿಗೆ ಹೆಚ್.ಐ.ವಿ ರೋಗ ಹರಡುತ್ತದೆ.

ಹೆಚ್.ಐ.ವಿ ರೋಗಲಕ್ಷಣಗಳು

ಹೆಚ್.ಐ.ವಿ ಸೋಂಕಿಗೆ ಒಳಗಾದ ವ್ಯಕ್ತಿಗೆ 2-4 ವಾರಗಳ ನಂತರ ಬಹಳಷ್ಟು ಫ್ಲೂನಂತಹ ಲಕ್ಷಣಗಳೇ ಕಾಣಿಸಿಕೂಳ್ಳುತ್ತದೆ.

  • ತಲೆ ನೋವು
  • ಜ್ವರ
  • ಕೀಲುನೋವು
  • ಆಯಾಸ
  • ಗಂಟಲು ಹಾಗು ಬಾಯಿಯಲ್ಲಿ ಹುಣ್ಣು
  • ಚರ್ಮದ ತುರಿಕೆ

ಏಡ್ಸ್, ಹೆಚ್.ಐ.ವಿ ಸೋಂಕಿನ ಕೂನೆಯ ಹಂತ ರೋಗಲಕ್ಷಣ

  • ದೇಹದ ತೂಕದಲ್ಲಿ ಇಳಿಕೆ
  • ಮೇಲಿಂದ ಮೇಲೆ ಜ್ವರ
  • ಕೆಮ್ಮು
  • ಅತಿಸಾರ
  • ಬಾಯಿಯಲ್ಲಿ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳುವುದು
  • ನೆನಪಿನ ಶಕ್ತಿ ಕುಂದುವುದು
  • ತಲೆನೋವು ಮತ್ತು ತಲೆಸುತ್ತು

    ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಹೆಚ್.ಐ.ವಿ ಯಂತಹ ಮಾರಕ ರೋಗವನ್ನ ಪ್ರಾರಂಬದಿಂದಲೇ ನಿರ್ಮೂಲನ ಮಾಡಬೇಕೆಂದರೆ, ಮೊದಲು ಜನರಲ್ಲಿ ಇದರ ಬಗ್ಗೆ ಅರಿವು ಹಾಗು ತಿಳುವಳಿಕೆ ಮೂಡಿಸುವುದು ಅತ್ಯಂತ ಅವಶ್ಯಕ

ಲೇಖಕರು
ಡಾ. ಸಿಂಧು ಪ್ರಶಾಂತ್
ಬಿ.ಎ.ಎಮ್.ಎಸ್, ಎಮ್.ಡಿ( ಎ.ಎಮ್),ಎಮ್.ಎಸ್ಸಿ(ಯೋಗ)
ದೂರವಾಣಿ-9743857575
ವೆಬ್ಸೈಟ್- www.yogaforpregnant.com

ಆಯುರ್ವೇಧದ ಹಾಗು ಯೋಗದ ಕ್ಷೇತ್ರದಲ್ಲಿ ಕಳೆದ 9 ವರ್ಷಗಳಿಂದ ಸಾಧನೆ ಮಾಡುತ್ತಿರುವ ಡಾ. ಸಿಂಧು ಪ್ರಶಾಂತರವರು ಹೆಸರಾಂತ ಆಯುರ್ವೇಧದ ತಙ್ಞೆ. ಕ್ರಾನಿಕ್ ಡಿಸೀಸ್(ಧೀರ್ಘಕಾಲದ ಕಾಯಿಲೆ), ಪ್ರಿವೆಂಟಿವ್ ಕೇರ್( ರೋಗ ನಿವಾರಣೆ ಹಾಗು ರೋಗಿಯ ಆರೈಕೆ), ಆಯುರ್ವೇಧದ ಪಥ್ಯಾ/ಅಪಥ್ಯಾ, ಒತ್ತಡ ನಿರ್ವಹಣೆ, ಲೈಫ್ ಸ್ಟೈಲ್ ಮ್ಯಾನೆಜ್ಮೆಂಟ್ಗಳ ಬಗ್ಗೆ ವಿಸ್ತಾರವಾದ ಅನುಭವವಿದ್ದು, ಹಲವಾರು ಅಸ್ವಸ್ಥರನ್ನು ಗುಣಮುಖವಾಗಿಸಿದ್ದಾರೆ ಹಾಗು ಗರ್ಭಿಣಿಯರ ಯೋಗದ ಬಗ್ಗೆ ವ್ಯಾಪಕ ಅಧ್ಯಯನ ಮಾಡಿ ಅತಿ ಶೀರ್ಘದಲ್ಲಿಯೇ ಅದರ ಮೇಳೆ ಬರೆದಿರುವ ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ