ತಮ್ಮನ್ನು ಸುಸ್ತಿದಾರ ಎಂದು ಬ್ರಾಂಡ್ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ವಿಜಯ್ ಮಲ್ಯ, ರಾಜಕಾರಣಿಗಳು, ಮಾಧ್ಯಮದವರು ನನ್ನನ್ನು ಪಿಎಸ್ ಯು ಬ್ಯಾಂಕ್ ಹಣದೊಂದಿಗೆ ಓಡಿ ಹೋಗುವವನ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಇದೆಲ್ಲಾ ಸುಳ್ಳು. ನಾನು ಒಟ್ಟಾರೆ ಪ್ರಕರಣದ ಇತ್ಯರ್ಥಕ್ಕೆ ಕರ್ನಾಟಕ ಹೈಕೋರ್ಟ್ ಮುಂದಿಟ್ಟಿರುವ ಪ್ರಸ್ತಾವನೆಗೆ ಏಕೆ ಇಷ್ಟೇ ಪ್ರಚಾರ ಸಿಕ್ಕುವುದಿಲ್ಲ ಎಂದು ಮಲ್ಯ ಪ್ರಶ್ನಿಸಿದ್ದಾರೆ.
ಬ್ಯಾಂಕ್ ಸಾಲ ಪೂರ್ತಿ ಅಸಲು ಪಾವತಿಸಲು ಸಿದ್ಧ, ದಯವಿಟ್ಟು ತೆಗೆದುಕೊಳ್ಳಿ: ಬ್ಯಾಂಕ್ ಗಳಿಗೆ ಮಲ್ಯ ಮನವಿ
ನವದೆಹಲಿ: ತಲೆ ಮರೆಸಿಕೊಂಡಿರುವ ಸುಸ್ತಿದಾರ ವಿಜಯ್ ಮಲ್ಯ ಶೇ.100 ರಷ್ಟು ಸಾಲದ ಮೂಲ ಮೊತ್ತವನ್ನು ಮರುಪಾವತಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ವಿಜಯ್ ಮಲ್ಯ, “ಅತಿ ಹೆಚ್ಚಿರುವ ಎಟಿಎಫ್ ಬೆಲೆಯಿಂದಾಗಿ ವಿಮಾನ ಸಂಸ್ಥೆಗಳು ಸಂಕಷ್ಟ ಎದುರಿಸುತ್ತಿವೆ. ಕಿಂಗ್ ಫಿಶರ್ ವಿಮಾನ ಸಂಸ್ಥೆ ಪ್ರತಿ ಬ್ಯಾರೆಲ್ ಗೆ 140 ಡಾಲರ್ ಇದ್ದಾಗ ಸಂಕಷ್ಟ ಎದುರಿಸುತ್ತಿತ್ತು. ಇದರಿಂದ ಉಂಟಾದ ನಷ್ಟಕ್ಕೇ ಬ್ಯಾಂಕ್ ನಿಂದ ಪಡೆದ ಸಾಲದ ಹಣ ಖರ್ಚಾಗಿತ್ತು. ಆದರೆ ಶೇ.100 ರಷ್ಟು ಅಸಲು ಹಣವನ್ನು ಬ್ಯಾಂಕ್ ಗಳಿಗೆ ಮರುಪಾವತಿ ಮಾಡಲು ಸಿದ್ಧನಿದ್ದೇನೆ ದಯವಿಟ್ಟು ತೆಗೆದುಕೊಳ್ಳಿ” ಎಂದು ವಿಜಯ್ ಮಲ್ಯ ಬ್ಯಾಂಕ್ ಗಳಿಗೆ ಮನವಿ ಮಾಡಿದ್ದಾರೆ.