ಬೆಂಗಳೂರು, ಡಿ.4-ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮಾಚಿ ದೇವ ಸಮಿತಿ ಸಹಯೋಗದೊಂದಿಗೆ ಅಶೋಕದೊಮ್ಮಲೂರು ಅವರ ಗಾಹನ ಚೇತನ ಗಾಡಿಗೆ ಬಾಬಾ ಮೂರು ಭಾಷೆಯ ಗ್ರಂಥ ಬಿಡುಗಡೆ ಸಮಾರಂಭವನ್ನು ಇದೇ 8ರಂದು ಸಂಜೆ 4 ಗಂಟೆಗೆ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪರಿಷತ್ನ ಬಸವರಾಜ್ ಸಾಧರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಆವೃತ್ತಿಯನ್ನು ಸಂಸದ ಮಲ್ಲಿಕಾರ್ಜುನಖರ್ಗೆ, ಹಿಂದಿ ಆವೃತ್ತಿಯನ್ನು ಸಂಸದ ರಾಜೇಶ್ಕುಮಾರ್ ದಿವಕರ್, ಇಂಗ್ಲಿಷ್ ಆವೃತ್ತಿಯನ್ನು ಗೌರವ ಸಲಹೆಗಾರ ಡಾ.ಗೋರೂರು ಚನ್ನಬಸಪ್ಪ ಅವರು ಲೋಕಾರ್ಪಣೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಎನ್.ಎ.ಹ್ಯಾರಿಶ್, ಪಿ.ಜಿ.ಆರ್.ಸಿಂಧ್ಯಾ ಭಾಗವಹಿಸಲಿದ್ದಾರೆ. ಕೃತಿಯನ್ನು ರಂಜನ್ದುರ್ಗ, ಡಾ.ಜಿ.ಪ್ರಭುಶಂಕರ್ ಪ್ರೇಮಿ ಕೃತಿ ಪರಿಚಯ ಮಾಡಲಿದ್ದಾರೆ ಎಂದು ತಿಳಿಸಿದರು.