ಬೆಂಗಳೂರು, ಡಿ.4-ಡಿಸ್ಕೋ ಟೆಕ್, ಡ್ಯಾನ್ಸ್ ಬಾರ್ಗಳ ಪರವಾನಗಿ ವಿಷಯದಲ್ಲಿ ಮತ್ತೆ ಪೆÇಲೀಸರು ಮತ್ತು ಮಾಲೀಕರ ನಡುವೆ ಹಗ್ಗಜಗ್ಗಾಟ ಆರಂಭಗೊಂಡಿದೆ.
ಡಿಸ್ಕೋ ಟೆಕ್, ಡ್ಯಾನ್ಸ್ ಬಾರ್, ನೈಟ್ ಕ್ಲಬ್ಗಳಲ್ಲಿ ಮಹಿಳೆಯರನ್ನು ಬಳಸಿಕೊಳ್ಳುವ ಕುರಿತು ತಗಾಧೆ ಉಂಟಾದ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.
ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಇವುಗಳಿಗೆ ಅನುಮತಿ ನೀಡಬಹುದು ಎಂದು ನಿರ್ದೇಶನ ನೀಡಿತ್ತು. ಅದನ್ನು ಆಧರಿಸಿ ಪೆÇಲೀಸರು ಸುರಕ್ಷತೆಯ ಮಾರ್ಗಸೂಚಿಗಳನ್ನು ರೂಪಿಸಿದ್ದರು.
ಈವರೆಗೂ ನಡೆಯುತ್ತಿದ್ದ ಎಲ್ಲಾ ರೀತಿಯ ಡಿಸ್ಕೋ ಟೆಕ್ಗಳು, ನೈಟ್ ಕ್ಲಬ್ಗಳು, ಡ್ಯಾನ್ಸ್ ಬಾರ್ಗಳು, ಮನರಂಜನಾ ಕ್ಲಬ್ಗಳಿಗೆ ಪೆÇಲೀಸರು ನೋಟಿಸ್ ನೀಡಿದ್ದರು. ತಮ್ಮ ಕ್ಲಬ್ನಲ್ಲಿ ಯಾವ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಸಮಗ್ರ ಮಾಹಿತಿಯೊಂದಿಗೆ ಹೊಸ ಪರವಾನಗಿ ಅಥವಾ ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಸೂಚಿಸಿದ್ದರು.
ಬೆಂಗಳೂರಿನಲ್ಲಿ ಸುಮಾರು 224ಕ್ಕೂ ಹೆಚ್ಚು ಈ ರೀತಿಯ ಡಿಸ್ಕೋ ಟೆಕ್ಗಳು, ನೈಟ್ ಕ್ಲಬ್ಗಳು, ಡ್ಯಾನ್ಸ್ ಬಾರ್ಗಳು, ಮನರಂಜನಾ ಕ್ಲಬ್ಗಳು ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದವು. ಆದರೆ ಈವರೆಗೂ ಬೆಂಗಳೂರು ಪೆÇಲೀಸರು ಪರವಾನಗಿ ನವೀಕರಿಸಿರುವುದು ಕೇವಲ ಆರಕ್ಕೆ ಮಾತ್ರ.ಉಳಿದ ಎಲ್ಲಾ ಅರ್ಜಿಗಳು ತಿರಸ್ಕøತಗೊಂಡಿವೆ ಎನ್ನಲಾಗಿದೆ.
ಪೆÇಲೀಸರು ರೂಪಿಸಿರುವ ಮಾರ್ಗಸೂಚಿಯಂತೆ ಸುರಕ್ಷತಾ ಕ್ರಮ ಕೈಗೊಳ್ಳುವುದು ಕಷ್ಟಸಾಧ್ಯದ ಕೆಲಸವಾಗಿದೆ. ಆಗೂಹೀಗೂ ಕಷ್ಟಪಟ್ಟು ಸುರಕ್ಷತಾ ಕ್ರಮಗಳ ಮಾರ್ಗಸೂಚಿಗಳನ್ನು ನಿಭಾಯಿಸಿದರೂ ಒಂದಲ್ಲ, ಒಂದು ನೆಪವೊಡ್ಡಿ ಅರ್ಜಿಗಳನ್ನು ವಜಾ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರು ಪೆÇಲೀಸರಿಗೆ ಡಿಸ್ಕೋ ಟೆಕ್ಗಳು, ನೈಟ್ ಕ್ಲಬ್ಗಳು, ಡ್ಯಾನ್ಸ್ ಬಾರ್ಗಳು, ಮನರಂಜನಾ ಕ್ಲಬ್ಗಳು ಅಧಿಕೃತವಾಗಿ ನಡೆಯುವುದು ಬೇಕಿಲ್ಲ. ಹಾಗಾಗಿ ಸಣ್ಣಪುಟ್ಟ ಕಾರಣಗಳನ್ನು ಮುಂದಿಟ್ಟುಕೊಂಡು ಪರವಾನಗಿ ಅರ್ಜಿಗಳನ್ನು ವಜಾಗೊಳಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.ಆದರೆ ಪೆÇಲೀಸ್ ಮೂಲಗಳ ಪ್ರಕಾರ ಹೈಕೋರ್ಟ್ನ ನೇರ ಉಸ್ತುವಾರಿಯಲ್ಲಿ ಪರವಾನಗಿ ನವೀಕರಿಸಬೇಕಿದ್ದು, ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಧಿಕಾರಿಗಳ ತಲೆದಂಡವಾಗಲಿದೆ. ಹಾಗಾಗಿ ಸುರಕ್ಷಿತ ಕ್ರಮಗಳ ಬಗ್ಗೆ ರಾಜೀ ಇಲ್ಲ. ಮಾರ್ಗಸೂಚಿಯ ನಿಯಮಗಳನ್ನು ಪಾಲಿಸುವ ಕ್ಲಬ್ಗಳಿಗೆ ಪರವಾನಗಿ ನೀಡಲು ಯಾವುದೇ ಅಡ್ಡಿಯಿಲ್ಲ ಎಂಬ ಸ್ಪಷ್ಟನೆ ಸಿಕ್ಕಿದೆ.