ಬೆಂಗಳೂರು, ಡಿ.3- ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಾದರಿಯಲ್ಲೇ ವಿಕಲಚೇತನರಿಗೆ ವಸತಿ ಶಾಲೆ ಸ್ಥಾಪಿಸಲಾಗುವುದು ಎಂದು ತಿಳಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮುಂದಿನ ಬಜೆಟ್ನಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುವುದು ಎಂಬ ಭರವಸೆ ನೀಡಿದರು.
ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವಿಶ್ವವಿಕಲಚೇತನ ದಿನಾಚರಣೆ-2018 ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಹಳಷ್ಟು ಅಂಗವಿಕಲ ಪೆÇೀಷಕರು ತಮ್ಮ ಬಳಿ ಬರುತ್ತಾರೆ. ಅವರ ನೋವನ್ನು ಕೇಳಿದ್ದೇನೆ. ವಿಕಲಚೇತನ ಮಕ್ಕಳ ಶಿಕ್ಷಕರಿಗೆ ಹೆಚ್ಚಿನ ವೇತನ, ಪ್ಯಾರಾ ಒಲಂಪಿಕ್‍ಗೆ ಹೋಗುವವರಿಗೆ ನೀಡುವ ಸೌಲಭ್ಯದಲ್ಲಿ ಹೆಚ್ಚಳ ಹಾಗೂ ವಿಕಲಚೇತನರ ಪರವಾಗಿ ಕೆಲಸ ಮಾಡುವವರಿಗೆ ನೀಡುವ ಗೌರವ ಧನ ಹೆಚ್ಚಳ ಕುರಿತಂತೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂಬ ಆಶಯ ವ್ಯಕ್ತಪಡಿಸಿದರು.
ಎರಡು ದಿನಗಳ ಹಿಂದೆ ದಾವಣಗೆರೆಯಿಂದ ವೀಲ್ ಚೇರ್‍ನಿಂದ ಬಂದ ಮಹಿಳೆ ತಮ್ಮನ್ನು ಗಂಡ ಸಾಲ ಮಾಡಿ ಬಿಟ್ಟು ಹೋಗಿದ್ದಾನೆ. ಎರಡು ಮಕ್ಕಳು ಇವೆ ಎಂದು ತಮ್ಮ ಬಳಿ ಹೇಳಿಕೊಂಡಿದ್ದರು.ಆಕೆಯನ್ನು ವಿಧಾನಸೌಧಕ್ಕೆ ಕರೆಸಿ ಎರಡು ಲಕ್ಷ ನೆರವು ನೀಡಿದ್ದೇನೆ. ಇದರಿಂದ ಬಟ್ಟೆ ವ್ಯಾಪಾರ ಮಾಡಿ ಬದುಕುತ್ತೇನೆ ಎಂದು ಹೇಳಿದ್ದಾರೆ.ಯಾರೂ ಆತಂಕ ಪಡಬೇಡಿ.ನಮ್ಮ ಸರ್ಕಾರ ನಿಮ್ಮ ಪರವಾಗಿದೆ ಎಂದು ಆಭಯ ನೀಡಿದರು.
ವಿಕಲಚೇತನರು ತಮ್ಮ ಲೋಪಗಳಿಂದ ಹೊರ ಬಂದು ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಳ್ಳಲು ದೇವರು ಸ್ಥೈರ್ಯ ತುಂಬಲಿ ಎಂದು ಪ್ರಾರ್ಥಿಸಿದ ಸಿಎಂ, ವಿಕಲಚೇತನರ ಬಗ್ಗೆ ಕೇವಲ ಅನುಕಂಪ ಬೇಕಿಲ್ಲ. ಎಲ್ಲಾ ಸರಿಯಿರುವ ಮಕ್ಕಳು ಮಾಡಲಾಗದಂತಹ ಕೆಲಸವನ್ನು ಈ ಮಕ್ಕಳು ಮಾಡುತ್ತಾರೆ.ಮಲ್ಲಕಂಬದಂತಹ ಸಾಹಸವನ್ನು ದೃಷ್ಟಿ ವಿಚಕಲಚೇತನ ಮಕ್ಕಳು ಮಾಡಿತೋರಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.