ಬೆಂಗಳೂರು, ಡಿ.3- ಏಷ್ಯಾ-ಒಷಿಯಾನಿಯಾ ಅಲ್ಟ್ರಾರನ್ನಿಂಗ್ ಚಾಂಪಿಯನ್ ಶಿಪ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮೊದಲ ಪದಕವನ್ನು ಉಲ್ಲಾಸ್ ನಾರಾಯಣ್ ಗಳಿಸಿಕೊಟ್ಟಿದ್ದಾರೆ.
ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕಗಳಿಸುವ ಮೂಲಕ ಭಾರತಕ್ಕೆ ಗೌರವ ತಂದುಕೊಟ್ಟಿರುವ ಅವರು, ಚಾಂಪಿಯನ್ಶಿಪ್ನಲ್ಲಿ 250ಕಿ.ಮೀ.ಕ್ರಮಿಸಿ ಮೂರನೇ ಸ್ಥಾನ ಪಡೆದುಕೊಂಡರು.
ಉಲ್ಲಾಸ್ ನಾರಾಯಣ್ ಸೇರಿದಂತೆ ಸುನಿಲ್ ಶರ್ಮಾ, ಎಲ್.ಎಲ್.ಮೀನಾ ಅವರನ್ನೊಳಗೊಂಡ ಭಾರತದ ಮಿಶ್ರತಂಡ ಒಟ್ಟು 644ಕಿ.ಮೀ.ನಷ್ಟು ಕ್ರಮಿಸಿ ಕಂಚಿನ ಪದಕ ತನ್ನದಾಗಿಸಿಕೊಂಡಿದೆ.
ಕಳೆದ ವರ್ಷವಷ್ಟೇ ಭಾರತದ ಅಥ್ಲೆಟಿಕ್ ಫೆಡರೇಶನ್ ಅಲ್ಟ್ರಾರನ್ನರ್ ಅಂತಾರಾಷ್ಟ್ರೀಯ ಸಂಸ್ಥೆಗೆ ಸೇರಿತ್ತು.ಈ ಬಾರಿ ನಡೆದ ಚಾಂಪಿಯನ್ಶಿಪ್ನಲ್ಲಿ ಉಲ್ಲಾಸ್ನಾರಾಯಣ್ ಪ್ರತ್ಯೇಕವಾಗಿ ಹಾಗೂ ತಂಡದ ಮೂಲಕ ಎರಡು ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಜಪಾನ್ನ ಯೋಶಿಹಿಕೊ ಇಶಿಕಾವಾ 253 ಕಿ.ಮೀ. ಕ್ರಮಿಸಿ ಚಿನ್ನ ಗೆದ್ದರೆ, 252 ಕಿ.ಮೀ. ಕ್ರಮಿಸಿದ ನೋಬುಯುಕಿ ತಕಾಹಶಿ ಬೆಳ್ಳಿ ಪದಕದೊಂದಿಗೆ ವಿಜಯ ಗಳಿಸಿದ್ದಾರೆ.