ಬೌಲರ್ಗಳಿಗೆ ಬೌಲಿಂಗ್ ಪಾಠ ಮಾಡಿದ ಕೊಹ್ಲಿ..!

ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಕ್ಯಾಪ್ಟನ್ ಕೊಹ್ಲಿಯ ವಿರಾಟ ರೂಪವನ್ನ ನೀವು ನೋಡಿದ್ದೀರಿ. ಆದ್ರೆ ಕೊಹ್ಲಿಯ ಇನ್ನೊಂದು ಮುಖವನ್ನ ನೀವು ನೋಡಿಲ್ಲ.ವರ್ಷಗಳ ಹಿಂದೆ ಆಗೊಮ್ಮೆ ಈಗೊಮ್ಮೆ ಕೊಹ್ಲಿ ಪಾರ್ಟ್ ಟೈಮ್ ಬೌಲರ್ ಆಗಿ ಹಾಕಿದನ್ನ ನೀವು ನೋಡಿರ್ತಿರಾ. ಇದೀಗ ವಿರಾಟ್ ಕೊಹ್ಲಿ ಬೌಲಿಂಗ್ ಹಾಕಿ ತಂಡದ ಬೌಲರ್ಗಳಿಗೆ ಬೌಲಿಂಗ್ ಪಾಠ ಹೇಳಿದ್ದಾರೆ.
ಟೀಂ ಇಂಡಿಯಾ ಕ್ಯಾಫ್ಟನ್ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ನ ಸರ್ವ ಶ್ರೇಷ್ಠ ಬ್ಯಾಟ್ಸ್ಮನ್. ಸದ್ಯ ಆಡಿದ ಮೂರು ಫಾರ್ಮೆಟ್ನಲ್ಲೂ ರನ್ ಮಳೆ ಸುರಿಸಿ ಕ್ರಿಕೆಟ್ ದಿಗ್ಗಜರ ದಾಖಲೆಗಳನ್ನೆಲ್ಲ ಉಡೀಸ್ ಮಾಡಿ ಬಿರುಗಾಳಿಯಂತೆ ಮುನ್ನಗುತ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ಒಂದಿಲ್ಲ ಒಂದು ದಾಖಲೆ ಬರೆದು ವಿರಾಟ ರೂಪ ತೋರಿಸಿರುವ ಕೊಹ್ಲಿ ತಮ್ಮ ಇನ್ನೊಂದು ಮುಖವನ್ನ ತೋರಿಸಿದ್ದಾರೆ. ಅದು ಬೌಲಿಂಗ್ ಮಾಡಿ ತಾನೊಬ್ಬ ಬೌಲರ್ ಅನ್ನೋದನ್ನ ಪ್ರೂವ್ ಮಾಡಿ ತೋರಿಸಿದ್ದಾರೆ.
ಬೌಲರ್ಗಳಿಗೆ ಬೌಲಿಂಗ್ ಕೋಚ್ ಆದ ಕೊಹ್ಲಿ..!
ಆಸ್ಟ್ರೇಲಿಯಾ ಇಲವೆನ್ ತಂಡದ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಾವೇ ಬೌಲಿಂಗ್ ಮಾಡಿ ಬೌಲಿಂಗ್ ಪಾಠ ಹೇಳಿಕೊಟ್ಟಿದ್ದಾರೆ. ಅಭ್ಯಾಸ ಪಂದ್ಯದ ಮೂರನೇ ದಿನ ಕ್ರಿಕೆಟ್ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳು ಟೀಂ ಇಂಡಿಯಾ ಬೌಲರ್ಗಳನ್ನ ಬೆಂಡೆತ್ತಿದ್ದರು. ಇದನ್ನು ಕಂಡ ಕ್ಯಾಪ್ಟನ್ ಕೊಹ್ಲಿ ಬೌಲಿಂಗ್ ಮಾಡಿ ಹೇಗೆ ಬೌಲಿಂಗ್ ಮಾಡಬೇಕೆಂದು ಪಾಠ ಹೇಳಿಕೊಟ್ಟಿದ್ದಾರೆ.
ಬೌಲಿಂಗ್ ಮಾಡಿ ವಿಕೆಟ್ ಪಡೆದು ಸಂಭ್ರಮಿಸಿದ ಕೊಹ್ಲಿ
ಒಟ್ಟು 17 ಓವರ್‌ಗಳನ್ನು ಸ್ಪೆಲ್ ಮಾಡಿದ ವಿರಾಟ್ 27 ರನ್ ಕೊಟ್ಟು ಒಂದು ವಿಕೆಟ್ ಕಬಳಿಸಿದ್ದರು.ಈ ಮೂಲಕ ಆಸ್ಟ್ರೇಲಿಯಾ ಪಿಚ್ಗಳಲ್ಲಿ ಬಾಲ್ ಟರ್ನ್ ಮಾಡುವುದು ಹೇಗೆ ಎದುರಾಳಿಗಳನ್ನ ನಾವು ಎದುರಿಸಬೇಕಾಗಿರುವುದು ಹೇಗೆ ಎಂದು ತಿಳಿಸಿದ್ರು. ಕೊಹ್ಲಿ ಬೌಲಿಂಗ್ ನೋಡಿ ತಂಡದ ಬೌಲರ್ಗಳು ಫಿದಾ ಆಗಿದ್ದಾರೆ.
ಹ್ಯಾರಿ ನೀಲ್ಸನ್ ವಿಕೆಟ್ ಪಡೆದು ಮಿಂಚಿದ ವಿರಾಟ್
ಸಿಡ್ನಿ ಮೈದಾನದಲ್ಲಿ ಆಸ್ಟ್ರೇಲಿಯಾ ಇಲೆವೆನ್ ತಂಡದ ಬ್ಯಾಟ್ಸ್ಮನ್ ಹ್ಯಾರಿ ನೀಲ್ಸನ್ ಶತಕದ ನೆರವಿನೊಂದಿಗೆ 544 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಮೂರನೇ ಹಾಗೂ ನಾಲ್ಕನೇ ದಿನದಾಟದಲ್ಲಿ ಕೊಹ್ಲಿ ಬೌಲಿಂಗ್ ಅಭ್ಯಾಸವನ್ನು ನಡೆಸಿದ್ದ ವಿರಾಟ್ ಶತಕವೀರ ನೀಲ್ಸನ್ ವಿಕೆಟ್ ಕಬಳಿಸುವ ಮೂಲಕ ತಾನೊಬ್ಬ ಬೌಲರ್ ಎಂಬುದನ್ನ ತೋರಿಸಿದ್ರು. ವಿಕೆಟ್ ಪಡೆದ ಕ್ಷಣವನ್ನ ಸ್ವತಃ ಕೊಹ್ಲಿಗೆ ನಂಬಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ ವಿಶಿಷ್ಟ ರೀತಿಯಲ್ಲಿ ಸಂಭ್ರಮಾಚರಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ