ಟೀಂ ಇಂಡಿಯಾ- ಕ್ರಿಕೆಟ್ ಆಸ್ಟ್ರೇಲಿಯಾ ಅಭ್ಯಾಸ ಪಂದ್ಯ ಡ್ರಾ

ಸಿಡ್ನಿ: ಟೀಂ ಇಂಡಿಯಾ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ನಡುವಿನ ಅಭ್ಯಾಸ ಪಂದ್ಯ ನಿರೀಕ್ಷೆಯಂತೆ ಡ್ರಾನಲ್ಲಿ ಅಂತ್ಯ ಕಂಡಿದೆ.
ಸಿಡ್ನಿ ಮೈದಾನದಲ್ಲಿ ನಡೆದ ಕೊನೆಯ ದಿನದಾಟದ ಪಂದ್ಯದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 544 ರನ್‍ಗಳಿಗೆ ಆಲೌಟ್ ಆಯಿತು. ಟೀಂ ಇಂಡಿಯಾ ಪರ ಮೊಹ್ಮದ್ ಶಮಿ ಮೂರು ವಿಕೆಟ್ ಪಡೆದರೆ. ಆರ್.ಅಶ್ವಿನ್ ಎರಡು ವಿಕೆಟ್ ಪಡೆದು ಮಿಂಚಿದ್ರು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಕ್ಕೆ ಆರಂಭಿಕ ಬ್ಯಾಟ್ಸ್‍ಮನ್‍ಗಳಾದ ಕನ್ನಡಿದ ಕೆ.ಎಲ್. ರಾಹುಲ್ ಮತ್ತು ಮುರಳಿ ವಿಜಯ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ತಮಿಳುನಾಡು ಬ್ಯಾಟ್ಸ್‍ಮನ್ ಮುರಳಿ ವಿಜಯ್ ಆಕರ್ಷಕ ಶತಕ ಬಾರಿಸಿದ್ರು. ಮುರಳಿ 132 ಎಸೆತದಲ್ಲಿ 16 ಬೌಂಡರಿ 5 ಸಿಕ್ಸ್‍ರ್ ಸಿಡಿಸಿ ಒಟ್ಟು 129 ರನ್ ಗಳಿಸಿದ್ರು. ಇವರಿಗೆ ಉತ್ತಮ ಜೊತೆಯಾಟ ನೀಡಿದ ಕೆ.ಎಲ್.ರಾಹುಲ್ 62 ರನ್ ಗಳಿಸಿದ್ರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ