
ಬೆಂಗಳೂರು,ಡಿ.2- ತನ್ನ ತಾಯಿ ಮತ್ತು ತಂಗಿಗೆ ಚುಚ್ಚುಮದ್ದು ನೀಡಿ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ವೈದ್ಯ ಡಾ.ಗೋವಿಂದಪ್ರಕಾಶ್ ಅವರು ಇನ್ನು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಾ.ಗೋವಿಂದಪ್ರಕಾಶ್ ಅವರ ಹೇಳಿಕೆಯನ್ನು ಪೆÇಲೀಸರು ಇನ್ನು ತೆಗೆದುಕೊಂಡಿಲ್ಲ. ಅವರು ಗುಣಮುಖರಾದ ನಂತರ ಅವರಿಂದ ಹೇಳಿಕೆ ಪಡೆಯಲಿದ್ದಾರೆ.
ಗೋವಿಂದಪ್ರಕಾಶ್ ಅವರ ತಾಯಿ ಮತ್ತು ತಂಗಿಯ ಮರಣೋತ್ತರ ಪರೀಕ್ಷೆಯನ್ನು ನಿನ್ನೆ ನಡೆಸಿ ಮೃತದೇಹಗಳನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.