ಹೆಣ್ಣುಮಗುವಿಗೆ ಜನ್ಮ ನೀಡಿದ ರಾಧಿಕಾ ಪಂಡಿತ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ರಾಧಿಕಾ ಪಂಡಿತ್ ಹ್ಜೆಣ್ನುಮಗುವಿಗೆ ಜನ್ಮ ನೀಡಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ 6-10 ಕ್ಕೆ ಹೆಣ್ಣು ಮಗುವಿಗೆ ರಾಧಿಕಾ ಪಂಡಿತ್ ಜನ್ಮ ನೀಡಿದ್ದಾರೆ. ತಾಯಿ- ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ ಎಂದು ಯಶ್ ತಿಳಿಸಿದ್ದಾರೆ.

ಡಿಸೆಂಬರ್ 9 ರಂದು ವೈದ್ಯರು ದಿನಾಂಕ ನೀಡಿದ್ದರೂ ಅದಕ್ಕೂ ಒಂದು ವಾರ ಮುಂಚಿತವಾಗಿಯೇ ರಾಧಿಕಾ ಪಂಡಿತ್ ತಾಯಿಯಾಗಿದ್ದು, ರಾಕಿಂಗ್ ಸ್ಟಾರ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಪುಟ್ಟ ಅತಿಥಿಯನ್ನು ಮನೆಗೆ ಬರಮಾಡಿಕೊಂಡಿದ್ದು, ಯಶ್ ಸಂತಸ ವ್ಯಕ್ತಪಡಿಸಿದ್ದಾರೆ.

Rocking Star Yash, Radhika Pandit , Baby girl

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ