ಫ್ರಾನ್ಸ್: ಘನ ತ್ಯಾಜ್ಯ ಸಂಸ್ಕರಣೆ ಸಂಬಂಧ ಫ್ರಾನ್ಸ್ ದೇಶಕ್ಕೆ ಅಧ್ಯಯನ ಪ್ರವಾಸ ಕೈಗೊಂಡಿರುವ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು, ಅಲ್ಲಿ ಆಯೋಜಿಸಿದ್ದ ಆಲ್ಟ್ರಿಯೋಮ್ 2.0 ನನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಕಳೆದ 200 ವರ್ಷಗಳಿಂದ ಭಾರತ ಹಾಗೂ ಫ್ರಾನ್ಸ್ ನಡುವೆ ಬಾಂಧವ್ಯ ಬೆಸೆದಿದೆ. ಫ್ರಾನ್ಸ್ನಲ್ಲಿ ತ್ಯಾಜ್ಯ ವಿಂಗಡಣೆ ಸಮರ್ಪಕವಾಗಿ ಸಾಗುತ್ತಿದೆ. ನಮ್ಮಲ್ಲಿ ತ್ಯಾಜ್ಯ ವಿಂಗಡಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ. 2013ರಲ್ಲಿ ಹಾಸನದಲ್ಲಿ ಮೊದಲ ಬಾರಿಗೆ ಒಣ ಹಾಗೂ ಹಸಿ ಕಸಗಳ ವಿಂಗಡಣೆಗೆ ಎರಡು ಬಿನ್ಗಳ ನೀಡಲಾಗುತ್ತು. ಆದರೆ ಅದರ ಬಳಕೆ ಮಾತ್ರ ಸಮರ್ಪಕವಾಗಿ ಆಗಲಿಲ್ಲ.
ಫ್ರಾನ್ಸ್ನಲ್ಲಿ ಶೇ. 90 ರಷ್ಟು ವಿಂಗಡಣೆಯಾಗಿಯೇ ಸಂಸ್ಕರಣೆಗೆ ಹೋಗುತ್ತಿದೆ. ಈ ಟೆಕ್ನಾಲಜಿ ಅತ್ಯಂತ ಉಪಯುಕ್ತವಾಗಿದೆ. ಈ ವ್ಯವಸ್ಥೆಯನ್ನು ಸಂಪೂರ್ಣ ಅಧ್ಯಯನ ಮಾಡಿದ್ದೇನೆ.