ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್​ ಎಚ್​ ಡಬ್ಲ್ಯೂ ಬುಶ್​ ನಿಧನ

ವಾಷಿಂಗ್ಟನ್: ರಷ್ಯಾ ಮತ್ತು ಅಮೆರಿಕ ಮನಡುವಿನ  ಶೀತಲ ಸಮರದ ಅಂತ್ಯಕ್ಕೆ  ಪ್ರಯತ್ನ ಮಾಡಿದ, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್​ ಎಚ್​.ಡಬ್ಲ್ಯೂ ಬುಶ್​ (94) ಸಾವನ್ನಪ್ಪಿದ್ದಾರೆ.

ಬುಶ್​ ಮಗ ಈ ಸಂತಾಪದ ವಿಷಯವನ್ನು ತಿಳಿಸಿದ್ದು ಈ ಕುರಿತು ಟ್ವೀಟರ್​ನಲ್ಲಿ ಪ್ರಕಟಣೆ ಹೊರಡಿಸಿದ್ದಾರೆ.

ಜಾರ್ಜ್​ ಎಚ್​. ಡಬ್ಲೂ ಬುಶ್​ ಒಬ್ಬ ಅತ್ತುತ್ತಮ ಗುಣವನ್ನು ಹೊಂದಿದ್ದ ವ್ಯಕ್ತಿಯಾಗಿದ್ದು ಉತ್ತಮ ತಂದೆಯಾಗಿದ್ದರು ಎಂದು ತಿಳಿಸಿದ್ದಾರೆ.

ಬುಶ್​ ಹೆಂಡತಿ ಬಾರ್ಬರ್​ ಬುಶ್​ ಕೂಡ ಕಳೆದ ಮಾರ್ಚ್​ನಲ್ಲಿ ಸಾವನ್ನಪ್ಪಿದ್ದರು. ಬುಶ್​ 5 ಮಕ್ಕಳು ಹಾಗೂ 17 ಮೊಮ್ಮಕ್ಕಳನ್ನು ಹೊಂದಿದ್ದಾರೆ.

ಅತ್ಯುತ್ತಮ ವಿದೇಶಿ ನೀತಿ ನಿರೂಪಕರಾಗಿದ್ದ ಇವರು 1990ರಲ್ಲಿ ಹೊಸ ವಿದೇಶಿ ಆದೇಶವನ್ನು ಪ್ರಕಟಿಸಿದ್ದರು  ಸದ್ದಂ ಹುಸೇನ್​ ಆಡಳಿತದ ಇರಾಕ್​ನಿಂದ ಕುವೈತ್​ನನ್ನು ಹೊರಗಟ್ಟಿದರು.  ಆದರೆ ಎರಡನೇ ಅವಧಿಯಲ್ಲಿ ತಮ್ಮ ಮಿಲಿಟರಿ ಹಸ್ತಕ್ಷೇಪದಲ್ಲಿ ಸೋಲನ್ನು ಅನುಭವಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ