ಕರ್ನಾಟಕ ಮತ್ತು ಅಮೆರಿಕಾ ನಡುವಿನ ವಾಣಿಜ್ಯ ಸಂಬಂಧ ಬಲವರ್ಧನೆ ಒತ್ತು

ಬೆಂಗಳೂರು, ನ.30- ಕರ್ನಾಟಕ ಮತ್ತು ಅಮೆರಿಕದ ನಡುವಿನ ವಾಣಿಜ್ಯ ಸಂಬಂಧ ಬಲವರ್ಧನೆ ಬಗ್ಗೆ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಇಂದು ಮಹತ್ವದ ದುಂಡುಮೇಜಿನ ಸಭೆ ನಡೆಯಿತು.

ವಿಧಾನಸೌಧದಲ್ಲಿಂದು ಇಂಡೋ ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್‍ನ 26 ಸದಸ್ಯರನ್ನೊಳಗೊಂಡ ನಿಯೋಗದೊಂದಿಗೆ ಅಮೆರಿಕ ಮತ್ತು ಕರ್ನಾಟಕ ವಾಣಿಜ್ಯ ಸಂಬಂಧ ವೃದ್ಧಿಗೊಳಿಸುವ ನಿಟ್ಟಿನಲ್ಲಿ ಸುದೀರ್ಘ ಸಮಾಲೋಚನೆ ನಡೆಸಲಾಯಿತು.

ಕರ್ನಾಟಕ ಮತ್ತು ಅಮೆರಿಕದ ವಾಣಿಜ್ಯ ಸಂಬಂಧದ ಬಲವರ್ಧನೆಗಾಗಿ ಕೌಶಲ್ಯ ಮರುಪೂರಣಗೊಳಿಸುವ ನಿಟ್ಟಿನಲ್ಲಿ ಸುದೀರ್ಘ ಸಮಾಲೋಚನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯದ ದ್ವಿತೀಯ ಮತ್ತು ತೃತೀಯ ಹಂತದ ನಗರಗಳಲ್ಲಿ ಜಾಗತಿಕ ವಾಣಿಜ್ಯ ಪರಿಸ್ಥಿತಿಯನ್ನು ಪರಿಗಣಿಸಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ಮರುಕೌಶಲ್ಯ, ವೃತ್ತಿ ಜೀವನದ ಮಧ್ಯ ಭಾಗದಲ್ಲಿ ನೀಡಬೇಕಾದ ತರಬೇತಿ, ಸಮುದಾಯ ಆಧಾರಿತ ಕೌಶಲ್ಯ ಡಿಪೆÇ್ಲಮೊ ಕೋರ್ಸ್‍ಗಳಿಗೆ ಸಂಬಂಧಿಸಿದಂತೆ ಅಮೆರಿಕದೊಂದಿಗಿನ ಸಹಕಾರ ಹಾಗೂ ಆ ದೇಶದ ಶಿಕ್ಷಣ ಸಂಸ್ಥೆಗಳ ಜತೆ ಸಹಭಾಗಿತ್ವ ಸ್ಥಾಪಿಸಿಕೊಳ್ಳುವ ಕುರಿತಂತೆ ವಿಚಾರ ವಿನಿಮಯ ನಡೆಸಲಾಯಿತು.
ರಾಜ್ಯದಲ್ಲಿ ಉದ್ಯಮಶೀಲತೆ ಮತ್ತು ನವೋದ್ಯಮ ಸ್ಥಾಪನೆಗೆ ಸೂಕ್ತ ವಾತಾವರಣವಿದ್ದು, ಮತ್ತಷ್ಟು ಸುಧಾರಿಸುವ ಅಗತ್ಯವಿದೆ ಎಂದು ಸಚಿವರು ಸಭೆಯಲ್ಲಿ ಗಮನ ಸೆಳೆದರು.
ಕೌಶಲಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಎ.ಎ.ಬಿಸ್ವಾಸ್, ಸಲಹೆಗಾರ ಡಾ.ಗುರುಚರಣ್, ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಸ್ರಫ್‍ಹುಲ್ ಹಾಸನ್ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ