ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಕನ್ನಡವನ್ನು ಸಜ್ಜುಗೊಳಿಸುವ ಕೆಲಸವಾಗಬೇಕು ಕಾಸಿಯಾ ಅಧ್ಯಕ್ಷರ ಹೇಳಿಕೆ

ಬೆಂಗಳೂರು, ನ.30- ರಾಜ್ಯೋತ್ಸವದ ಈ ಸಂದರ್ಭದಲ್ಲಿ ಕನ್ನಡದ ಬಗ್ಗೆ ಇಂದು ಮತ್ತು ನಾಳೆಗಳನ್ನು ಅವಲೋಕಿಸುವ ದೃಷ್ಟಿ ಮಹತ್ವದ್ದಾಗಿದೆ.ಕೇವಲ ಭಾವನಾತ್ಮಕ ನೆಲೆಯಲ್ಲೇ ಚಿಂತನೆಗಳು ಮೊಳೆಯದೆ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಕನ್ನಡವನ್ನು ಸಜ್ಜುಗೊಳಿಸುವ ಕೆಲಸ ಅವಶ್ಯವಾಗಿದೆ ಎಂದು ಕಾಸಿಯಾ ಅಧ್ಯಕ್ಷ ಬಸವರಾಜ್ ಎಸ್.ಜವಳಿ ಅಭಿಪ್ರಾಯಪಟ್ಟರು.

ನಗರದ ಕಾಸಿಯಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಡಿಂಡಿಮ, ಕನ್ನಡವೇ ಸತ್ಯ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ತುರ್ತು ಪರಿಸ್ಥಿತಿಯಲ್ಲಿ ಕನ್ನಡವನ್ನು ಒಳಗಿನಿಂದಲೇ ಸಶಕ್ತಗೊಳಿಸುವ ಅಗತ್ಯವಿದೆ.ಜಾಗತಿಕ ಮಟ್ಟದಲ್ಲಿ ಯಾವ ರೂಪದಲ್ಲಿ ಕನ್ನಡವನ್ನು ಬಿಂಬಿಸಬೇಕು ಎಂಬ ನಿಟ್ಟಿನಲ್ಲಿ ಕ್ರಿಯಾ ಯೋಜನೆಯೊಂದು ಜಾರಿಗೊಳ್ಳಬೇಕಿದೆ. ವಿಶ್ವದ ಅನೇಕ ಭಾಗಗಳಲ್ಲಿ ಕನ್ನಡದ ಬಗ್ಗೆ ಅರಿವಿರಲಿ ಕೇವಲ ಹೆಸರೂ ತಿಳಿದಿಲ್ಲ. ಇಂತಹ ಸಂದರ್ಭಗಳಲ್ಲಿ ವಿಶ್ವದ ಪ್ರತಿಷ್ಠಿತ ಯೂನಿವರ್ ಸಿಟಿಗಳಲ್ಲಿ ಕನ್ನಡ ಕಲಿಕೆ ಮತ್ತು ಸಂಶೋಧನೆಗಳ ಯೋಜನೆಗಳನ್ನು ರಾಜ್ಯ ಸರ್ಕಾರ ರೂಪಿಸಬೇಕಾಗಿದೆ ಎಂದರು.
ಕನ್ನಡಮ್ಮನ ಹುಟ್ಟುಹಬ್ಬವನ್ನು ಪುಸ್ತಕಗಳ ಜತೆ ಆಚರಿಸಿ ಪುಸ್ತಕ ಕೊಂಡು, ಪುಸ್ತಕ ಓದಿ ಮತ್ತು ಪುಸ್ತಕ ಕೊಟ್ಟು ಸಂಭ್ರಮಿಸಿ ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಕರ್ನಾಟಕ ಕ್ಯಾನ್ಸರ್ ಸೊಸೈಟಿ ಅಧ್ಯಕ್ಷ ಪೆÇ್ರ.ಡಾ.ಆಂಜನಪ್ಪ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಸಂಗೀತ ಶಿಕ್ಷಕ ಸಿದ್ದರಾಮ ಕೇಸಾಪುರ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ