ಕೋಚ್ ಹುದ್ದೆಯಲ್ಲಿ ರಮೇಶ್ ಪವಾರ್ ಮುಂದುವರೆಯೋದು ಅನುಮಾನ

ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಜೊತೆ ಕೊಚ್ ರಮೇಸ್ ಪವಾರ್ ಕಾದಾಟಕ್ಕಿಳಿದಿರುವ ಹಿನ್ನೆಲೆಯಲ್ಲಿ ತರಬೇತಿ ಅವಧಿಯನ್ನü ಬಿಸಿಸಿಐ ವಿಸ್ತರಿಸುವುದಿಲ್ಲ ಎಂದು ತಿಳಿದು ಬಂದಿದೆ.

ಇತ್ತಿಚೆಗೆ ಮುಕ್ತಾಯವಾದ ವಿಶ್ವ ಟಿ20 ವಿಶ್ವಕಪ್ ಮಹಿಳಾ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಆಂಗ್ಲರ ವಿರುದ್ಧದ ಪಂದ್ಯದಲ್ಲಿ ತಂಡದ ಅನುಭವಿ ಆಟಗಾರ್ತಿ ಮಿಥಾಲಿ ರಾಜ್‍ಗೆ ಅವಕಾಶ ಕೊಟ್ಟಿರಲಿಲ್ಲ. ಇದು ಭಾರಿ ವಿವಾದವನ್ನ ಸೃಷ್ಟಿಸಿತ್ತು.

ಸ್ವತಃ ಮಿಥಾಲಿ ರಾಜ್ ತಮ್ಮನ್ನ ಸೆಮಿಫೈನಲ್ ಪಂದ್ಯದಲ್ಲಿ ಆಡಿಸದಿರುವ ಕುರಿತು ಕೋಚ್ ರಮೇಶ್ ಪವಾರ್ ಮತ್ತು ತಂಡದ ಮಾಜಿ ಆಟಗಾರ್ತಿ ಡೈಯಾನಾ ಎಡುಲ್ಜಿ ವಿರುದ್ಧ ಹರಿಹಾಯ್ದಿದಿದ್ದರು.

ಇದಕ್ಕೆ ಕೋಚ್ ರಮೇಶ್ ಪವಾರ್, ಟೂರ್ನಿ ವೇಳೆ ಮಿಥಾಲಿ ಅವರ ವರ್ತನೆಯಿಂದ ಬೇಸರವಾಗಿತ್ತು. ಟೂರ್ನಿ ಆಡುವಾಗ ತಂಡದ ಪ್ಲಾನ್ ಪ್ರಕಾರ ಆಡುತ್ತಿರಲ್ಲಿಲ್ಲ. ತಂಡದಲ್ಲಿ ತಮ್ಮ ಪಾತ್ರವನ್ನ ಮರೆತು ತಮ್ಮ ದಾಖಲೆಗಳ ಬಗ್ಗೆ ಮಾತ್ರ ತಲೆ ಕೆಡಿಸಿಕೊಂಡಿದ್ದರು. ಅಭ್ಯಾಸ ಪಂದ್ಯದ ವೇಳೆ ಮಿಥಾಲಿ ರನ್ ಗಳಿಸಲು ಪರದಾಡುತ್ತಿದ್ದರು. ಟೂರ್ನಿ ಆಡುವ ವೇಳೆ ತನಗೆ ಆರಂಭಿಕ ಬ್ಯಾಟ್ಸ್‍ಮನ್‍ನ್ನಾಗಿ ಕಳುಹಿಸದಿದ್ದರೆ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿ ತವರಿಗೆ ತೆರೆಳುವುದಾಗಿ ಬೆದರಿಕೆಯೊಡ್ಡಿದ್ದರು ಎಂದು ಪವಾರ್ ಬಿಸಿಸಿಐಗೆ ತಿಳಿಸಿದ್ದರು.

ಕೋಚ್ ರಮೇಶ್ ಪವಾರ್ ಮಾತನ್ನ ಕೇಳದ ಬಿಸಿಸಿಐ ರಮೇಶ್ ಪವಾರ್ ವಿರುದ್ಧವೇ ತಿರುಗಿ ಬಿದ್ದಿದ್ದು ಕೋಚ್ ಹುದ್ದೆಯಲ್ಲಿ ಮುಂದುವರಿಸಬಾರದೆಂದು ಬಿಸಿಸಿಐ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ