ಕನಿಷ್ಟ ಕೂಲಿ ವೇತನಕ್ಕೆ ಒತ್ತಾಯಿಸಿ ಡಿ.3ರಂದು ಬೀಡಿ ನೌಕರರ ಹೋರಾಟ

ಬೆಂಗಳೂರು, ನ.30-ಬೀಡಿ ಕಾರ್ಮಿಕರಿಗೆ ನಿಗದಿಯಾದ ಕನಿಷ್ಠ ಕೂಲಿ ವೇತನವನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿ ಡಿ.3 ರಂದು ಕಾರ್ಮಿಕ ಭವನದಲ್ಲಿ ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಕಾರ್ಮಿಕ ಒಕ್ಕೂಟದ ಅಧ್ಯಕ್ಛ್ಷ ಬಿ.ಎಂ.ಭಟ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರ ಏಪ್ರಿಲ್ 1 ರಂದು ಕರ್ನಾಟಕ ರಾಜ್ಯ ಸರ್ಕಾರವು ನೂತನ ಆದೇಶವನ್ನು ಹೊರಡಿಸಿ ಒಂದು ಸಾವಿರ ಬೀಡಿಗೆ 220.52ರೂ.ವೇತನ ಜಾರಿಗೊಳಿಸಿದೆ.ಆದರೆ ಬೀಡಿ ಮಾಲೀಕರು ಇದನ್ನು ಜಾರಿ ಮಾಡದೆ ಕಾರ್ಮಿಕರಿಗೆ ಒಂದು ಸಾವಿರ ಬೀಡಿಗೆ 180.54ರೂ. ನಂತೆ ಮಾತ್ರ ವೇತನ ನೀಡುತ್ತಿದ್ದು, ರಾಜ್ಯದ 8 ಲಕ್ಷ ಬೀಡಿ ಕಾರ್ಮಿಕರಿಗೆ ವಂಚಿಸಿದ್ದಾರೆ ಎಂದು ಆರೋಪಿಸಿದರು.

2015ರ ಏಪ್ರಿಲ್ 15 ರಿಂದ ಒಂದು ದಿನಕ್ಕೆ 12.75ರೂ.ತುಟ್ಟಿ ಭತ್ಯೆ ನೀಡಬೇಕಿತ್ತು. ಆದರೆ ಇದುವರೆಗೂ ನೀಡದೆ ಕಾರ್ಮಿಕರಿಗೆ ವಂಚಿಸಿದ್ದಾರೆ ಎಂದು ತಿಳಿಸಿದರು.
ಆದ್ದರಿಂದ ಈ ಹಣವನ್ನು ಕಾರ್ಮಿಕರಿಗೆ ತಲುಪಿಸುವ ಮೂಲಕ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ಡಿ.3 ರಂದು ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ