ನವದೆಹಲಿ: ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪೊಲೀಸ್ ಪ್ರಧಾನ ಕಚೇರಿಯ ಕಟ್ಟದ 10ನೇ ಮಹಡಿಯಿದಲೇ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಪ್ರೇಮ್ ಬಲ್ಲಭ್(53) ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿ. ಇವರು ಕಳೆದ 28 ದಿನಗಳಿಂದ ದೆಹಲಿಯ ಆಸ್ಪತ್ರೆಯೊಂದರಲ್ಲಿ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಬಲ್ಲಭ್ ಅವರು ಸಹಾಯಕ ಪೊಲೀಸ್ ಆಯುಕ್ತರಾಗಿದ್ದು(ACP), ದೆಹಲಿಯ ಕೇಂದ್ರ ಭಾಗದಲ್ಲಿರುವ ಐಟಿಒ ಪ್ರದೇಶದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಪೊಲೀಸ್ ಪ್ರಧಾನ ಕಚೇರಿ ಬಳಿ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ಜೋರಾದ ಶಬ್ಧವನ್ನು ಕೇಳಿ ಹೋಗಿ ನೋಡಲು ಕಚೇರಿಯ ಪ್ರವೇಶ ದ್ವಾರದ ಬಳಿ ಬಲ್ಲಭ್ ಅವರು ಬಿದ್ದಿರುವುದನ್ನು ಕಂಡುಬಂದಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಧೃಡಪಡಿಸಿದ್ದಾರೆ.
ದೆಹಲಿಯ ಅಪರಾಧ ಹಾಗೂ ಸಂಚಾರಿ ವಿಭಾಗಗಳಲ್ಲೂ ಬಲ್ಲಭ್ ಕಾರ್ಯನಿರ್ವಹಿಸಿದ್ದಾರೆ. 1986ರಲ್ಲಿ ದೆಹಲಿ ಪೊಲೀಸ್ ಹುದ್ದೆಗೆ ಸೇರಿದ ಅವರು 2016ರಲ್ಲಿ ಎಸಿಪಿಯಾಗಿ ಬಡ್ತಿ ಪಡೆದಿದ್ದರು.
Senior Delhi Cop Battling Depression Jumps Off 10th Floor Of Headquarters