ಮೂಲವ್ಯಾಧಿಯೆಂದರೆ ಹ್ಯಾಮರಾಯ್ಡ್ಸ್‍ನ ಇನ್ನೊಂದು ಹೆಸರು. ಇದು ಗುದದ್ವಾರದ ಭಾಗದಲ್ಲಿ ಅಂಗಾಂಶಗಳು ಊದುವಿಕೆಯ ಹೆಸರು. ಮುಖ್ಯವಾಗಿ ಗುದದ್ವಾರದ ಒಳಗೆ, ಗುದನಾಳ ಇಲ್ಲವೇ ಅದರ ಸುತ್ತಮುತ್ತಲಲ್ಲಿ ರಕ್ತನಾಳಗಳು ಊದಿಕೊಳ್ಳುತ್ತವೆ. ಇದು ಯಾರಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದಾದರೂ, 50 ವರ್ಷ ಮೀರಿದ ಶೇ.50ರಷ್ಟು ಜನರಲ್ಲಿ ಈ ಕಾಯಿಲೆಗಳು ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಮಹಿಳೆಯರು ಸಾಮಾನ್ಯವಾಗಿ ಗರ್ಭಾವಸ್ಥೆ ಇಲ್ಲವೇ ಹೆರಿಗೆ ಸಂದರ್ಭದಲ್ಲಿ ಮೂಲವ್ಯಾಧಿಯ ಸಮಸ್ಯೆ ಎದುರಿಸುತ್ತಾರೆ.
50 ವರ್ಷದ ನಂತರ ಯಾಕೆ?
ಮೂಲವ್ಯಾಧಿಯ ಮೂಲ ಕಾರಣ ಮಲಬದ್ಧತೆ. ಇದು 50 ವರ್ಷ ಮೀರಿದ ಜನರಲ್ಲಿ ಸಾಮಾನ್ಯವಾಗಿರುತ್ತದೆ. ಈ ವಯಸ್ಸಿನಲ್ಲಿ ಮಲವಿಸರ್ಜನೆ ಕಷ್ಟವಾಗುತ್ತದೆ. ಆಗ ಜನರು ಕರುಳಿನ ಮೇಲೆ ಒತ್ತಡ ಹಾಕುತ್ತಾರೆ. ಇದು ರಕ್ತನಾಳದ ಮೇಲೆ ಒತ್ತಡ ಬಿದ್ದು, ರಕ್ತ ಹೆಪ್ಪುಗಟ್ಟಿ ಊದಿಕೊಳ್ಳುತ್ತದೆ. ಜೊತೆಗೆ, ಅನುವಂಶೀಯ ಕಾರಣಗಳು ಮೂಲವ್ಯಾಧಿಗೆ ಕಾರಣವಾಗುತ್ತದೆ. ಬೊಜ್ಜು ಕೂಡ ಇದಕ್ಕೆ ಪ್ರಮೂಕ ಕಾರಣ. ಕರುಳಿನ ಕಾಯಿಲೆಗಳು ಕೂಡ ಇದಕ್ಕೆ ಕಾರಣವಾಗುತ್ತದೆ.
ಮೂಲವ್ಯಾಧಿಯ ಲಕ್ಷಣಗಳು
ಮೂಲವ್ಯಾಧಿ ಆಂತರಿಕ ಇಲ್ಲವೇ ಬಹಿರಂಗವಾಗಿರಬಹುದು. ಆಂತರಿಕ ವ್ಯಾಧಿ ಸಾಮಾನ್ಯವಾಗಿ ರಕ್ತಹೆಪ್ಪುಗಟ್ಟುವಿಕೆಯಿಂದ ಉಂಟಾಗಿದ್ದು, ನೋವಿನಿಂದ ಕೂಡಿರುತ್ತದೆ. ಇದರ ಲಕ್ಷಣಳೆಂದರೆ ಗುದದ್ವಾಋದ ನೋವು, ತುರುಸುವಿಕೆ, ಗೆಡ್ಡೆಗಳೂ, ಕೆಂಪು ಗೆರೆಗಳೂ, ಮಲವಿಸರ್ಜನೆಯಲ್ಲಿ ರಕ್ತಸ್ತ್ರಾವ, ಒಳ ಉಡುಪುಗಳು, ಶೌಚಾಲಯಗಳಲ್ಲಿ ಮಲವಿಸರ್ಜನೆಯ ನಂತರ ರಕ್ತದ ಕಲೆಗಳು. ಹೆಚ್ಚುವರಿ ಲಕ್ಷಣಗಳೆಂದರೆ, ಒಳ ಉಡುಪುಗಳ ಮೇಲೆ ಲೋಳೆ ಇಲ್ಲವೇ ಮಲ ಕಾಣಿಸಕೊಳ್ಳುವುದು.
50ರ ನಂತರ ಮೂಲವ್ಯಾಧಿಯ ನಿರ್ವಹಣೆ, ತಡೆ ಹೇಗೆ ?
ಮೂಲವ್ಯಾಧಿ ನಿವಾರಣೆಯ ಸುಲಭ ವಿಧಾನವೆಂದರೆ, ಆರೋಗ್ಯಪೂರ್ಣ ಆಹಾರ ಸೇವನೆ ಹಾಗೂ ಸಾಕಷ್ಟು ವ್ಯಾಯಾಮ. ಈಗಾಗಲೇ ಮೂಲವ್ಯಾಧಿಯಿಂದ ಬಳಲುತ್ತಿರುವವರು ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳಬೇಕು. 50 ರ ನಂತರ ಮಲಬದ್ಧತೆ ಹೆಚ್ಚಾಗಿರುವುದರಿಂದ ರೋಗಿಗಳು ತಮ್ಮ ವೈದ್ಯರನ್ನು ಸಂಪರ್ಕಿಸಿ ಇತರ ಸಮಸ್ಯೆಗಳಿಗೆ ಅವರು ಈಗಾಗಲೇ ಸೇವಿಸುತ್ತಿರುವ ಔಷಧಗಳು ಮಲಬದ್ಧತೆಗೆ ಕಾರಣವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಹಾಗಿದ್ದಲ್ಲಿ ಅವರು ವೈದ್ಯರಿಗೆ ಮಲಬದ್ಧತೆ ಉಂಟುಮಾಡದ ಔಷಧ ನೀಡುವಂತೆ ಕೋರಬೇಕು.
ಮಲಬದ್ಧತೆಯನ್ನು ನಾರಿನಂಶ ಹೆಚ್ಚಿರುವ ಕಾಳುಗಳೂ, ಹಣ್ಣು, ತರಕಾರಿಗಳ ಸೇವನೆ, ದಿನಕ್ಕೆ 6ಕ್ಕೂ ಹೆಚ್ಚು ಗ್ಲಾಸ್‍ನ ನೀರು ಸೇವನೆಯಿಂದ ತಡೆಯಬಹದು. ಮುಖ್ಯವಾಗಿ ಮದ್ಯಪಾನ ಹಾಘೂ ಕಾಫಿಯ ಸೇವನೆ ಹಾಗೂ ಅದಕ್ಕೆ ಸಮತೋಲನ ಮಾಡುವ ನೀರು ಸೇವನೆ ಮಾಡದಿರುವುದು ಕೂಡ ಮಲಬದ್ಧತೆಗೆ ಕಾರಣವಾಗಬಹುದು. ನಾರಿನಾಂಶ ಹೆಚ್ಚಿರುವ ಆಹಾರ ಮಲವಿಸರ್ಜನೆಯನ್ನು ಸುಲಭಗೊಳಿಸುತ್ತದೆ. ಸಂಸ್ಕರಿಸಿದ ಆಹಾರದ ಸೇವನೆಯಿಂದ ಕೂಡ ಮಲಬದ್ಧತೆ ಉಂಟಾಗುತ್ತದೆ. ಆದ್ದರಿಂದ ಚಿಪ್ಸ್, ಕೇಕ್ ಹಾಗೂ ಚಾಕಲೇಟ್‍ಗಳ ಸೇವನೆಯನ್ನು ಕಡಿಮೆಗೊಳಿಸಬೇಕು.
ಉತ್ತಮ ವ್ಯಾಯಾಮ ಕೂಡ ನೆರವಾಗುತ್ತದೆ. 50 ವರ್ಷ ಮೀರಿದವರು, ಯಾವುದೇ ನ್ಯೂನತೆಗಳಿಲ್ಲದಿದ್ದಲ್ಲಿ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಬಹುದು. ಹೆಚ್ಚು ಹೊತ್ತಿನ ಕಾಲ ಶೌಚಾಲಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದಲ್ಲ. ಇದರಿಂದ ನೀವು ಕರುಳಿನ ಮೇಲೆ ಒತ್ತಡ ಹಾಕುತ್ತೀರಿ. ಮಲವಿಸರ್ಜನೆಯ ನಂತರ ಆ ಭಾಗವನ್ನು ಮೃದುವಾಗಿ ಸ್ವಚ್ಚಗೊಳಿಸುವುದರಿಂದ ತುರಿಸುವಿಕೆ ಮತ್ತಿತರರ ತೊಂದರೆಗಳನ್ನು ತಡೆಯಬಹುದು.
ಲೇಖಕರು
ಡಾ. ಪರಮೇಶ್ವರ್ ಸಿ.ಎಂ
ಕೊಲೊರೆಕ್ಟಲ್ ಸರ್ಜನ್
ಬೆಂಗಳೂರು ಸ್ಮೈಲ್ಸ್ ಆಸ್ಪತ್ರೆ