ಭಾರತದ ಡಿಜಿಟಲೈಜೇಷನ್ ಪರಿವರ್ತನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ನ.29- ಭಾರತದ ಡಿಜಿಟಲೈಜೇಷನ್ ಪರಿವರ್ತನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಹೊಸ ಆವಿಷ್ಕಾರಗಳನ್ನು ವಾಣಿಜ್ಯೀಕರಣಗೊಳಿಸುವ ಸಲುವಾಗಿ ರಾಜ್ಯ ಆವಿಷ್ಕಾರ ಪ್ರಾಧಿಕಾರವನ್ನು ಸ್ಥಾಪನೆ ಮಾಡಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಅರಮನೆ ಆವರಣದಲ್ಲಿ ಇಂದಿನಿಂದ ಆರಂಭಗೊಂಡ ಬೆಂಗಳೂರು ಟೆಕ್ ಸಮ್ಮಿಟ್-2018 ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಅವರು, ಈ ಅಭಿವೃದ್ಧಿ ಪ್ರಾಧಿಕಾರವು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ರಚನೆಯಾಗಲಿದ್ದು, ನವೋದ್ಯಮಿಗಳಿಗೆ ಎದುರಾಗುವ ಕಾನೂನಾತ್ಮಕ ಹಾಗೂ ಇತರೆ ಅಡೆತಡೆಗಳಿಗೆ ಪರಿಹಾರ ಒದಗಿಸಲಿದೆ.

ಪ್ರಾಧಿಕಾರ ರಚನೆಗೆ ಸಂಬಂಧಪಟ್ಟಂತೆ ಈಗಾಗಲೇ ಕಾನೂನಿನ ಚೌಕಟ್ಟನ್ನು ಸಿದ್ದಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಾಧಿಕಾರ ಕರ್ನಾಟಕದ ಬೌದ್ಧಿಕ ಆಸ್ತಿಯಾಗಿ ಪರಿವರ್ತನೆಯಾಗಲಿದೆ.ಐಟಿ ಕ್ಷೇತ್ರದ ಐಪಿ ನೋಂದಣಿ, ಮಾರುಕಟ್ಟೆ ಸ್ಥಳಾವಕಾಶಗಳೂ ಹೆಚ್ಚಾಗಲಿವೆ ನೂತನ ಆವಿಷ್ಕಾರಗಳ ಹಕ್ಕುಸಾಮ್ಯತೆಯನ್ನು ರಚಿಸಲಾಗುತ್ತದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಈ ವರ್ಷ 77 ನವೋದ್ಯಮಗಳನ್ನು ಆಯ್ಕೆ ಮಾಡಿಕೊಂಡಿದೆ. ಅವುಗಳಿಗೆ ತಲಾ 50 ಲಕ್ಷ ಅನುದಾನ ಒದಗಿಸಲಾಗುತ್ತಿದೆ. ಇದಕ್ಕಾಗಿ 16 ಕೋಟಿ ಮೀಸಲಿಡಲಾಗಿದೆ. ಹಿಂದುಳಿದ ಕರ್ನಾಟಕ ಭಾಗಕ್ಕೆ 10 ನವೋದ್ಯಮಗಳನ್ನು ಮಂಜೂರು ಮಾಡಲಾಗಿದ್ದು, 1.11 ಕೋಟಿ ರೂ.ವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ಭಾರತದ ತಂತ್ರಜ್ಞಾನ ರಾಜಧಾನಿಯಾಗಿದೆ. ಈ ವರ್ಷದ ಆರಂಭದ ಆರು ತಿಂಗಳಲ್ಲಿ 21.5ಮಿಲಿಯನ್ ಚದರ ಅಡಿ ಜಾಗವನ್ನು ಒದಗಿಸಲಾಗಿದೆ. ಇದು ಭಾರತದ ಒಟ್ಟಾರೆ ಸ್ಥಳಾವಕಾಶದಲ್ಲಿ ಶೇ.30ರಷ್ಟಾಗಿದೆ.ಬೆಂಗಳೂರಿನಲ್ಲೇ 6.5ಮಿಲಿಯನ್ ಚದರ ಅಡಿಯನ್ನು ಮಾಹಿತಿ ತಂತ್ರಜ್ಞಾನ ಇಲಾಖೆಗೆ ನೀಡಿರುವುದಾಗಿ ಸಿಎಂ ಹೇಳಿದರು.

ಕರ್ನಾಟಕ ವಿದೇಶಿ ನೇರ ಹೂಡಿಕೆಯಲ್ಲಿ ನಿಯಮಿತವಾಗಿ ಮುಂಚೂಣಿ ಸ್ಥಾನವನ್ನು ಕಾಯ್ದುಕೊಂಡು ಬರುತ್ತಿದೆ.ಐಟಿಬಿಟಿ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಯಿಂದ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಬೆಂಗಳೂರು ಒಂದರಲ್ಲೇ ಮೂರು ದಶಲಕ್ಷ ಉದ್ಯೋಗ ಅವಕಾಶಗಳು ಸೃಷ್ಟಿಯಾಗಿವೆ. 2016ರಲ್ಲಿ 943 ಬಹುರಾಷ್ಟ್ರೀಯ ಕಂಪೆನಿಗಳಿದ್ದವು.2017ರಲ್ಲಿ ಅವುಗಳ ಸಂಖ್ಯೆ 976ಕ್ಕೆ ಹೆಚ್ಚಾಗಿವೆ ಎಂದು ತಿಳಿಸಿದರು.

21ನೇ ಬೆಂಗಳೂರು ಟೆಕ್ ಸಮ್ಮೇಳನ ಪರಸ್ಪರ ಹೊಸ ಆಲೋಚನೆಗಳ ವಿನಿಮಯ, ಆವಿಷ್ಕಾರಗಳ ಅನಾವರಣಕ್ಕೆ ವೇದಿಕೆಯಾಗಿದೆ.ದೇಶ-ವಿದೇಶಗಳಿಂದಲೂ ಲಕ್ಷಾಂತರ ಪ್ರತಿನಿಧಿಗಳು ಬರುತ್ತಿದ್ದಾರೆ. ಬೆಂಗಳೂರು ಸಮ್ಮೇಳನ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ವಾಕಥಾನ್‍ನಲ್ಲಿ 68 ದೇಶಗಳ 4300ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಅದರಲ್ಲಿ 20 ಮಂದಿಗೆ ಬಹುಮಾನಗಳನ್ನು ನೀಡಲಾಗಿದೆ.ಅವರ ಆವಿಷ್ಕಾರಗಳನ್ನು ಪೆÇ್ರೀ ಮಾಹಿತಿ ತಂತ್ರಜ್ಞಾನ, ಆರೋಗ್ಯ, ಕೃಷಿ, ಹವಮಾನ ಬದಲಾವಣೆ ಸೇರಿದಂತೆ ಹಲವಾರು ಗಂಭೀರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂಬ ನಿರೀಕ್ಷೆಗಳಿವೆ ಎಂದು ಕುಮಾರಸ್ವಾಮಿ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಐಟಿಬಿಟಿ ಸಚಿವ ಕೆ.ಜೆ.ಜಾರ್ಜ್ ಅವರು, ರಾಜ್ಯದ 33 ಕಾಲೇಜುಗಳಲ್ಲೂ ಕೈಗಾರಿಕೆಗಳನ್ನು ಪೆÇ್ರೀ ಸಲುವಾಗಿ ಪ್ರಾಥಮಿಕ ಮಾಹಿತಿ ನೀಡುವ ಇನ್‍ಕ್ಯೂಬೇಷನ್ ಸೆಂಟರ್‍ಗಳನ್ನು ಆರಂಭಿಸಲಾಗುತ್ತಿದೆ. ಮೊದಲ ಹಂತದಲ್ಲಿ 9, ಎರಡನೇ ಹಂತದಲ್ಲಿ 10 ಹಾಗೂ ಮೂರನೇ ಹಂತದಲ್ಲಿ 14 ಇನ್‍ಕ್ಯೂಬೇಷನ್ ಸೆಂಟರ್‍ಗಳನ್ನು ಆರಂಭಿಸಲಾಗುವುದು , ಪ್ರತಿ ಕಾಲೇಜುಗಳಿಗೂ 40 ಲಕ್ಷರೂ ನೀಡಲಾಗುವುದು ಎಂದರು.

ಈ ಮೊದಲು ಬೆಂಗಳೂರು ಎಂದರೆ ಕಾಲ್‍ಸೆಂಟರ್ ಹಾಗೂ ಹೊರಗುತ್ತಿಗೆಯ ನಗರ ಎಂಬ ಭಾವನೆ ಇತ್ತು. ಈಗ ಅದು ಬದಲಾವಣೆಯಾಗಿದೆ.ಆವಿಷ್ಕಾರಗಳ ನಗರವಾಗಿದೆ.ದೇಶ-ವಿದೇಶಗಳಲ್ಲೂ ಹೆಚ್ಚು ಪ್ರಖ್ಯಾತಿಗೊಂಡಿದೆ. ನ್ಯಾನೋ ತಂತ್ರಜ್ಞಾನವನ್ನು ಆರ್ಥಿಕತೆಯ ಅಭಿವೃದ್ಧಿಗೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗವುದು ಎಂದರು.

ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಮುಂದಿನ ವರ್ಷ ಬೆಂಗಳೂರಿನಲ್ಲಿ ಕೌಶಲ್ಯ ಮೇಳ ಆಯೋಜಿಸಲಾಗುವುದು ಎಂದರು.
ಕರ್ನಾಟಕ ಹೂಡಿಕೆಗೆ ಅತ್ಯಂತ ಸುರಕ್ಷಿತ ತಾಣ.ಇಲ್ಲಿ ಕೈಗಾರಿಕೆಗೆ ಪೂರಕವಾಗಿ ಶೈಕ್ಷಣಿಕ ಕೌಶಲ್ಯತೆ ಒದಗಿಸುವ ಅಗತ್ಯದೆ ಇದ್ದು, ಅದಕ್ಕಾಗಿ ನಾವು ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದೇವೆ ಎಂದರು.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಆಸ್ಟ್ರೇಲಿಯಾದ ನಾವಿನ್ಯತೆ ಮತ್ತು ಪ್ರವಾಸೋದ್ಯಮ ಸಚಿವೆ ಕೇಟ್ ಜೋನ್ಸ್, ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ನವದೆಹಲಿಯ ಸಾಫ್ಟ್‍ವೇರ್ ಟೆಕ್ನಾಲಜಿ ಪಾಕ್ರ್ಸ್ ಆಫ್ ಇಂಡಿಯಾದ ನಿರ್ದೇಶಕ ಡಾ.ಓಂಕಾರ್ ರೈ, ಬಯೋಕಾನ್ ಅಧ್ಯಕ್ಷ ಡಾ.ಕಿರಣ್ ಮುಜುಂದಾರ್ ಷಾ, ಇನ್‍ಫೆÇೀಸಿಸ್ ಸಹ ಸಂಸ್ಥಾಪಕ ಎಸ್.ಗೋಪಾಲಕೃಷ್ಣನ್, ಐಟಿಬಿಟಿ , ಎಸ್‍ಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ನಿರ್ದೇಶಕರಾದ ವಿನೋತ್ ಪ್ರಿಯಾ, ಶೈಲೇಂದ್ರ ಕೆ.ತ್ಯಾಗಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ