ಮಾಹಿತಿ-ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಹೊಂದಿತ್ತಿರುವ ರಾಜ್ಯ

ಬೆಂಗಳೂರು, ನ.28- ಕರ್ನಾಟಕ ಮಾಹಿತಿ-ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿದ್ದು, ಅದರಲ್ಲೂ ಬೆಂಗಳೂರು ತಂತ್ರಜ್ಞಾನದ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಬಸವರಾಜ್ ಎಸ್.ಜವಳಿ ಅಭಿಪ್ರಾಯಪಟ್ಟಿದ್ದಾರೆ.

ಕಾಸಿಯಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಚಕ್ ರಿಪಬ್ಲಿಕ್ ಉದ್ಯಮಿ (ವಾಣಿಜ್ಯ) ನಿಯೋಗದೊಂದಿಗೆ ಬಿ2ಬಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದಲ್ಲಿ ಕೈಗಾರಿಕೆಗಳ ಉತ್ತೇಜನಕ್ಕೆ ಸಾಕಷ್ಟು ಅವಕಾಶಗಳಿವೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಾಣಿಜ್ಯ ಒಪ್ಪಂದಕ್ಕೆ ಅವಕಾಶಗಳಿವೆ.ಇದನ್ನು ಸದುಪಯೋಗಪಡಿಸಿಕೊಂಡು ವಾಣಿಜ್ಯ ಒಪ್ಪಂದದೊಡನೆ ಚಕ್ ರಿಪಬ್ಲಿಕ್ ಅಭಿವೃದ್ಧಿಯತ್ತ ಮುನ್ನಡೆಯಬೇಕಿದೆ.ಇದಕ್ಕೆ ಕಾಸಿಯಾ ಸಂಪೂರ್ಣ ಸಹಕಾರ ಮತ್ತು ಪೆÇ್ರೀ ನೀಡುತ್ತದೆ ಎಂದು ತಿಳಿಸಿದರು.

ನವದೆಹಲಿಯ ಚಕ್ ರಾಯಭಾರಿ ಮಿಲನ್ ಹೊವಾರ್ಕ್ ಮಾತನಾಡಿ, ಕಾಸಿಯಾ ಸದಸ್ಯರ ನಡುವೆ ಪರಸ್ಪರ ವ್ಯಾಪಾರ ನಡೆಯುವಂತೆ ಸಮನ್ವಯತೆ, ಸಾಮರಸ್ಯ ಸಾಧಿಸಿ ಸೌಹಾರ್ದಯುತ ಉದ್ಯಮ ಸಮೂಹ ನಿರ್ಮಾಣಕ್ಕೆ ಪರಿಶ್ರಮಯುಕ್ತ ಕಾರ್ಯಪ್ರವೃತ್ತರಾಗಬಹುದಾಗಿದೆ.ಈಗಾಗಲೇ ಕರ್ನಾಟಕದಿಂದ ಸಚಿವರ ನೇತೃತ್ವದ ವಾಣಿಜ್ಯ ನಿಯೋಗಗಳು ಚಕ್ ಗಣರಾಜ್ಯಕ್ಕೆ ಭೇಟಿ ನೀಡಿ ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕುವುದರ ಮೂಲಕ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ವಲಯ ಮುಖ್ಯ ಪ್ರಧಾನ ವ್ಯವಸ್ಥಾಪಕ ಪಿ.ರವಿಕುಮಾರ್, ಮೋಹನ್ ಸುರೇಶ್, ಶ್ರೀಕಂಠದತ್ತ, ಕಾಸಿಯಾ ಗೌರವ ಕಾರ್ಯದರ್ಶಿ ರವಿಕಿರಣ್ ಕುಲಕರ್ಣಿ, ಲಿಬರ್ ಮುಸಿಲ್ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ