ಅಂಬರೀಶ್ ಅವರ ಸಮಾಧಿ ದರ್ಶನಕ್ಕೆ ರಾಜ್ಯದ ವಿವಿಧೆಡೆಯಿಂದ ಜನರು ಇಂದೂ ಕೂಡ ಆಗಮಿಸಿದ್ದರು

ಬೆಂಗಳೂರು, ನ.27- ಅಂಬರೀಶ್ ಅವರ ಸಮಾಧಿ ದರ್ಶನಕ್ಕೆ ರಾಜ್ಯದ ವಿವಿಧೆಡೆಯಿಂದ ಇಂದೂ ಕೂಡ ಜನರು ಆಗಮಿಸಿದ್ದರು.

ನಿನ್ನೆ ಅಂಬರೀಶ್ ಅವರ ಅಂತ್ಯಸಂಸ್ಕಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಅಂತಿಮ ದರ್ಶನ ಪಡೆಯಲು ಸಾಕಷ್ಟು ಜನರಿಗೆ ಸಾಧ್ಯವಾಗಲಿಲ್ಲ. ಕನಿಷ್ಠ ಅವರ ಸಮಾಧಿ ಸ್ಥಳವನ್ನಾದರೂ ದರ್ಶನ ಮಾಡಬೇಕೆಂದು ಬೆಳಗ್ಗೆಯಿಂದಲೇ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಕೈ ಮುಗಿಯುತ್ತಿದ್ದು, ಕಂಡು ಬಂತು.

ಪೆÇಲೀಸರು ಸಾರ್ವಜನಿಕರನ್ನು ಹತ್ತಿರ ಬಿಡದೆ ದೂರದಿಂದ ನಿಂತು ನೋಡಲು ಪ್ರತ್ಯೇಕ ವ್ಯವಸ್ಥೆ ಮಾಡಿದ್ದರು. ಅಂಬರೀಶ್ ನಿಧನದ ನಂತರ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕಿಡಲಾಗಿತ್ತು.

ಸಹಸ್ರಾರು ಅಭಿಮಾನಿಗಳು, ಗಣ್ಯರು ಅಲ್ಲಿ ಅಂತಿಮ ದರ್ಶನ ಪಡೆದರು. ನಂತರ ತವರು ಜಿಲ್ಲೆ ಮಂಡ್ಯಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ದು ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಅಲ್ಲಿ ಸಂಜೆ 6 ರಿಂದ ಬೆಳಗ್ಗೆ 11 ಗಂಟೆಯವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ, ಅಲ್ಲಿಂದ ನಗರದ ಕ್ರೀಡಾಂಗಣಕ್ಕೆ ತಂದು ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಈ ಎಲ್ಲಾ ಸಂದರ್ಭದಲ್ಲೂ ಹಲವು ಅಭಿಮಾನಿಗಳಿಗೆ ಅಂಬರೀಶ್‍ರವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ. ನಿನ್ನೆ ಕಂಠೀರವ ಸ್ಟುಡಿಯೋದ ಬಳಿ ಸಹಸ್ರಾರು ಜನ ಸೇರಿದ್ದರು. ಎಲ್ಲರಿಗೂ ಅಂತಿಮ ದರ್ಶನ ಮಾಡಲಾಗಲಿಲ್ಲ. ಹಾಗಾಗಿ ಇಂದು ಅವರ ಸಮಾಧಿ ಸ್ಥಳವನ್ನಾದರೂ ದರ್ಶನ ಮಾಡಬೇಕೆಂದು ಮುಂಜಾನೆಯಿಂದಲೇ ಸಾಕಷ್ಟು ಜನ ಜಮಾಯಿಸಿದ್ದರು.

ಆದರೆ ಕಂಠೀರವ ಸ್ಟುಡಿಯೋ ಗೇಟ್ ಮುಚ್ಚಲಾಗಿತ್ತು ಹಾಗೂ ಪೆÇಲೀಸರ ಕಣ್ಗಾವಲು ಹಾಕಲಾಗಿತ್ತು. ಆದರೆ ಅಭಿಮಾನಿಗಳ ಒತ್ತಾಯಗಳ ಮೇರೆಗೆ ಬೆಳಗ್ಗೆ 8 ಗಂಟೆ ನಂತರ ಅಂಬಿ ಅವರ ಸಮಾಧಿ ಸ್ಥಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು.

ಕನ್ನಡ ಪರ ಸಂಘಟನೆಗಳು, ಸಂಘಟನೆಗಳ ಕಾರ್ಯಕರ್ತರು, ಅಂಬಿ ಅಭಿಮಾನಿಗಳು, ವಿವಿಧ ಸಂಘಸಂಸ್ಥೆಗಳವರು ಅಲ್ಲಿದ್ದ ಅಂಬರೀಶ್ ಭಾವಚಿತ್ರಕ್ಕೆ ನಮನ ಸಲ್ಲಿಸಿ ತಮ್ಮ ಶೋಕ ವ್ಯಕ್ತಪಡಿಸುತ್ತಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ