ಮಧ್ಯಪ್ರದೇಶ ಚುನಾವಣೆ: ಶೂ ಪಾಲೀಶ್ ಮಾಡಿ ಮತಯಾಚಿಸಿದ ಅಭ್ಯರ್ಥಿ

ಭೋಪಾಲ್: ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು, ರಾಜಕೀಯ ಪಕ್ಷಗಳು ಒಂದೆಡೆ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದರೆ, ಇನ್ನೊಂದೆಡೆ ಮತದಾರರ ಓಲೈಕೆಗಾಗಿ ಅಭ್ಯರ್ಥಿಗಳು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ.

ರಾಷ್ಟ್ರೀಯ ಆಮ್ಜಾನ್‌ ಪಕ್ಷದ ಅಭ್ಯರ್ಥಿ ಶರದ್‌ ಸಿಂಗ್‌ ಕುಮಾರ್‌ ಚುನಾವಣೆ ಗುರುತಾಗಿ ಶೂವನ್ನು ಹೊಂದಿದ್ದು, ಶೂ ಪಾಲೀಶ್‌ ಮಾಡುವ ಮೂಲಕ ಮತಯಾಚಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಗುರುತಾದ ಶೂಗೆ ಅನನ್ಯವಾದ ಮತ ನೀಡುವಂತೆ ಕೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಶರದ್ ಸಿಂಗ್, ಇದೊಂದು ಉಚಿತ ಮತದಾನದ ಚಿಹ್ನೆಯಾಗಿತ್ತು. ಯಾರೊಬ್ಬರು ತೆಗೆದುಕೊಳ್ಳಲು ಸಿದ್ಧರಿರರಲಿಲ್ಲ. ಹಾಗಾಗಿ ನಾವು ಇದನ್ನು ತೆಗೆದುಕೊಂಡಿದ್ದು, ಇದನ್ನೇ ಆಶೀರ್ವಾದವನ್ನಾಗಿ ಬದಲಾಗಿಸುತ್ತೇವೆ ಎಂದು ಹೇಳಿದ್ದಾರೆ.

230 ವಿಧಾನಸಭೆ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ ನ. 28 ರಂದು ಚುನಾವಣೆ ನಡೆಯಲಿದ್ದು, ಡಿ. 11 ರಂದು ಫಲಿತಾಂಶ ಪ್ರಕಟವಾಗಿಲಿದೆ.

Madhya Pradesh election,Candidate sharad singh,Polishing Shoes,campaigning

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ