ಶಾಲಾ ಮಕ್ಕಳ ಹೊರೆ ಇಳಿಸಿದ ಕೇಂದ್ರ ಸರ್ಕಾರ: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಮಾರ್ಗದರ್ಶಿ ಸೂತ್ರ

ನವದೆಹಲಿ: ಶಾಲಾ ಮಕ್ಕಳ ಪುಸ್ತಕದ ಹೊರೆಯನ್ನು ಇಳಿಸಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಹೊಸ ಮಾರ್ಗದರ್ಶಿ ಸೂತ್ರವನ್ನು ಜಾರಿಗೆ ತಂದಿದೆ.

ಮಕ್ಕಳ ಪಠ್ಯ-ಪುಸ್ತಕಗಳ ಹೊರೆ, ಹೋಮ್ ವರ್ಕ್ ವಿಚಾರದಲ್ಲಿ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಮ್ಮ ಮಾರ್ಗದರ್ಶಿ ಸೂತ್ರ ಪಾಲಿಸುವಂತೆ ನಿರ್ದೇಶನ ನೀಡಿದೆ.

ಮಾರ್ಗದರ್ಶಿ ಸೂತ್ರದ ಪ್ರಮುಖ ಅಂಶಗಳು :

* ಶಿಕ್ಷಕರು 1 ಮತ್ತು 2 ನೇ ತರಗತಿಯ ಶಾಲಾ ಮಕ್ಕಳಿಗೆ ಹೋಂ ವರ್ಕ್ ಕೊಡುವಂತಿಲ್ಲ
* 1 ಮತ್ತು 2 ನೇ ತರಗತಿಯ ಮಕ್ಕಳಿಗೆ ಒಂದೂವರೆ ಕೆಜಿಯಷ್ಟು ಮಾತ್ರ ಬ್ಯಾಗಿನ ತೂಕವಿರಬೇಕು
* 1 ಮತ್ತು 2 ನೇ ತರಗತಿಯ ಶಾಲಾ ಮಕ್ಕಳಿಗೆ ಗಣಿತ ಹಾಗೂ ಭಾಷಾ ವಿಷಯಗಳನ್ನು ಮಾತ್ರ ನಿಗದಿ ಮಾಡಬೇಕು.
* 3 ಮತ್ತು 4 ನೇ ತರಗತಿ ಓದುತ್ತಿರುವ ಮಕ್ಕಳಿಗೆ ಗಣಿತ, ಭಾಷೆ ಹಾಗೂ ಇವಿಎಸ್‌ ಭಾಷೆಗಳನ್ನು ಮಾತ್ರ ನಿಗದಿ ಮಾಡಬೇಕು
* 3 ಮತ್ತು 5 ನೇ ತರಗತಿಯ ಮಕ್ಕಳಿಗೆ 2 – 3 ಕೆ.ಜಿ
* 6 ರಿಂದ 7 ನೇ ತರಗತಿಯ ಮಕ್ಕಳಿಗೆ 4 ಕೆಜಿ,
* 8 ಮತ್ತು 9 ನೇ ತರಗತಿಯ ಮಕ್ಕಳಿಗೆ ನಾಲ್ಕೂವರೆ ಕೆಜಿ ಹಾಗೂ
* 10 ನೇ ತರಗತಿಯ ಮಕ್ಕಳಿಗೆ ಐದು ಕೆಜಿ ಬ್ಯಾಗ್ ತೂಕ ಮೀರುವಂತಿಲ್ಲ

ಈ ಕುರಿತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮಾರ್ಗದರ್ಶಿ ಸೂತ್ರದಲ್ಲಿ ಸೂಚನೆ ನೀಡಿದೆ.

central government,directs,states,union territories, light weight, school bags

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ