ಬೆಂಗಳೂರು, ನ.24- ಸಂಚಾರ ಸುರಕ್ಷತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಇದೇ 26ರಂದು ಬೃಹತ್ ಜಾಥಾವನ್ನು ಲಯನ್ಸ್ ಸೇವಾ ಸಂಸ್ಥೆಯಿಂದ ಹಮ್ಮಿಕೊಂಡಿರುವುದಾಗಿ ಎಚ್ಎಂಜೆಎಫ್ ಪ್ರಾಂತೀಯ ಅಧ್ಯಕ್ಷ ಡಾ.ಎಚ್.ಅರುಣ್ಕುಮಾರ್ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಥಾವನ್ನು ಪುರಭವನದ ಬಳಿ ಉದ್ಘಾಟಿಸಿ ಎಂಜಿ ರಸ್ತೆಯ ಗಾಂಧಿ ಪ್ರತಿಮೆಯವರೆಗೆ ಜಾಥಾ ನಡೆಸುವುದಾಗಿ ಹೇಳಿದರು.
ಜಾಥಾವನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉದ್ಘಾಟಿಸುವರು, ಮೇಯರ್ ಗಂಗಾಂಬಿಕೆ, ನಗರ ಪೆÇಲೀಸ್ ಆಯುಕ್ತ ಟಿ.ಸುನೀಲ್ಕುಮಾರ್, ಅಡಿಷನಲ್ ಪೆÇಲೀಸ್ ಕಮೀಷನರ್ ಹಾಗೂ ರಸ್ತೆ ಸಂಚಾರ ಅಧಿಕಾರಿ ಹರಿಹರನ್ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಡಿಸೆಂಬರ್ ಒಂದರಂದು ವಿಜಯನಗರದ ಬಂಟರ ಸಂಘದಲ್ಲಿ ಪ್ರಾಂತೀಯ ಸಮ್ಮೇಳನವನ್ನು ಆಯೋಜಿಸಿದ್ದು, ಸಮ್ಮೇಳನದಲ್ಲಿ ಡೈರೆಕ್ಟರ್ ಜನರಲ್ ಆಫ್ ಪೆÇಲೀಸ್ ಭಾಸ್ಕರ್ ರಾವ್, ಟ್ರಾಫಿಕ್ ಮುಖ್ಯಾಧಿಕಾರಿ ಪೆÇ್ರ.ಎಂ.ಎನ್.ಹರಿ ಭಾಗವಹಿಸಲಿದ್ದಾರೆ. ಇದರಲ್ಲಿ 800ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವರು ಎಂದು ಅವರು ಹೇಳಿದರು.