ಬೆಂಗಳೂರು, ನ.24- ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳು ಶಾಲಾ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ನೀಡುವ ವಿಚಾರದಲ್ಲಿ ನಿದ್ರೆಯಲ್ಲಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಸುನಿಲ್ಇಜಾರಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪ್ರತಿ ವರ್ಷ ಜೂನ್-ಜುಲೈ ತಿಂಗಳಲ್ಲೇ ಸಮವಸ್ತ್ರ ನೀಡಬೇಕು.ಆದರೆ, ಈ ವರ್ಷ ನವೆಂಬರ್ ಕೊನೆವಾರ ಬಂದರೂ ಶಾಲಾ ಮಕ್ಕಳಿಗೆ ಒಂದೇ ಒಂದು ಜೊತೆ ಸಮವಸ್ತ್ರ ನೀಡಲಾಗಿದೆ.ಇನ್ನೊಂದು ಜೊತೆ ಕೊಟ್ಟಿಲ್ಲ ಎಂದು ದೂರಿದರು.
ಇದರ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಕೇಂದ್ರದಿಂದ ಹಣ ಬಂದಿಲ್ಲವೆಂದು ಹೇಳುತ್ತಾರೆ.ಆದ್ದರಿಂದ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಮಕ್ಕಳಿಗೆ ಇನ್ನೊಂದು ಜೊತೆ ಸಮವಸ್ತ್ರ ನೀಡಬೇಕೆಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜು, ನಂದನ್ ಉಪಸ್ಥಿತರಿದ್ದರು.