ನಾಲೆಗೆ ಉರುಳಿದ ಬಸ್: 30ಕ್ಕೂ ಹೆಚ್ಚು ಪ್ರಯಾಣಿಕರ ಸಾವು

ಮಂಡ್ಯ, ನ.24-ಖಾಸಗಿ ಬಸ್ಸೊಂದು ನಾಲೆಗೆ ಉರುಳಿ ಒಂಬತ್ತು ಶಾಲಾ ಮಕ್ಕಳು ಸೇರಿ 30ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿರುವ ಭೀಕರಘಟನೆಇಂದು ಮಧ್ಯಾಹ್ನ ಪಾಂಡವಪುರದಕನಗನಮರಡಿ ಬಳಿ ನಡೆದಿದೆ.

ಪಾಂಡವಪುರದಿಂದ ಮಂಡ್ಯಕ್ಕೆ ಹೋಗುತ್ತಿದ್ದ ಈ ಬಸ್ ಕನಗನಮರಡಿ ಬಳಿ ಬಂದಾಗ ಚಾಲಕನ ನಿಯಂತ್ರಣತಪ್ಪಿ ನೇರವಾಗಿ ವಿ.ಸಿ.ನಾಲೆಗೆ ಉರುಳಿದೆ. ಬಸ್ ಸಂಪೂರ್ಣ ನೀರಿನಲ್ಲಿ ಮುಳುಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಇದೆ.ಬಸ್‍ನಲ್ಲಿ 50ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದರುಎಂದು ತಿಳಿದುಬಂದಿದೆ.
ವಿಷಯ ತಿಳಿದ ತಕ್ಷಣ ಸ್ಥಳೀಯ ಗ್ರಾಮಸ್ಥರು, ಪೆÇಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾಕಾರ್ಯದಲ್ಲಿತೊಡಗಿದ್ದಾರೆ. ಹಲವು ಮೃತದೇಹಗಳನ್ನು ಬಸ್‍ನಿಂದ ಹೊರಗೆತೆಗೆದು ಆಸ್ಪತ್ರೆಗೆರವಾನಿಸಲಾಗಿದೆ.

ಎಂದಿನಂತೆ ರಾಜ್‍ಕುಮಾರ್ ಎಂಬ ಬಸ್ ಅದೇ ಮಾರ್ಗದಲ್ಲಿ ಬರುತ್ತಿತ್ತು. ಚಾಲಕನಿಗೆ ಮತ್ತು ಪ್ರಯಾಣಿಕರಿಗೆ ಈ ದಾರಿಹೊಸದೇನೂ ಅಲ್ಲ. ಇಂದು ಪ್ರಯಾಣಿಕರನ್ನು ತುಂಬಿಕೊಂಡು ಮಧ್ಯಾಹ್ನ 12 ಗಂಟೆಯ ವೇಳೆಗೆ ಕನಗನಮರಡಿ ಸಮೀಪದ 15 ಅಡಿ ಆಳದ ವಿ.ಸಿ.ನಾಲೆಯ ರಸ್ತೆಯ ಮೇಲೆ ಚಲಿಸುತ್ತಿದ್ದಾಗ ಚಾಲಕ ಸಮರ್ಪಕವಾಗಿ ಚಾಲನೆಮಾಡದ ಹಿನ್ನಲೆ, ತಿರುವುಪಡೆದುಕೊಳ್ಳದ ಬಸ್ ನೇರವಾಗಿಚಲಿಸಿದ ಪರಿಣಾಮ ಒಂದೆರೆಡುಕ್ಷಣಗಳಲ್ಲಿ ಬಸ್ ನ ಎಡಭಾಗ ನಿಯಂತ್ರಣತಪ್ಪಿ ನಾಲೆಗೆ ಉರುಳಿತು. ಪರಿಣಾಮವಾಗಿ 9 ಮುದ್ದು ಕಂದಮ್ಮಗಳು ಸೇರಿದಂತೆ 6 ಜನಪುರುಷರು ಮತ್ತು 15 ಜನಮಹಿಳೆಯರು ಸೇರಿದಂತೆ ಒಟ್ಟು 30 ಮಂದಿ ಜೀವಕ್ಕೆಎರವಾಯಿತು. ಅಸ್ವಸ್ಥಗೊಂಡಿದ್ದ ಕೆಲವರನ್ನು ಹೊರತೆಗೆದು ರಕ್ಷಿಸಲಾಗಿದೆ.

ಪ್ರತಿ ದಿನ ಈ ಬಸ್‍ನಲ್ಲಿ ಬೆಳಗ್ಗೆ ಮತ್ತು ಸಂಜೆ ಪ್ರಯಾಣಿಕರಿಂದ ತುಂಬಿತುಳುಕುತ್ತಿತ್ತು.ಆದರೆಇಂದು ಶನಿವಾರ ಹಾಗೂ ಮಧ್ಯಾಹ್ನವಾದುದರಿಂದ ಪ್ರಯಾಣಿಕರ ಸಂಖ್ಯೆಕಡಿಮೆಇತ್ತು.

ನಾಲೆಯಲ್ಲಿ ಕೆಲವರುಕೊಚ್ಚಿ ಹೋಗಿರುವ ಸಾಧ್ಯತೆಕೂಡಇದೆಎಂದು ಹೇಳಲಾಗಿದೆ. ಸ್ಥಳೀಯ ಗ್ರಾಮಸ್ಥರು ಮತ್ತುಅಗ್ನಿಶಾಮಕ ದಳದವರು ನೀರಿಗೆಅಡ್ಡಲಾಗಿ ಬಲೆ ಹಾಕಿ ಶೋಧಕಾರ್ಯ ನಡೆಸುತ್ತಿದ್ದಾರೆ.ಬಸ್ಚಾಲಕಶಿವಣ್ಣಹೊಳಲುಗ್ರಾಮದವನಾಗಿದ್ದುಘಟನೆಯನಂತರಪರಾರಿಯಾಗಿದ್ದಾನೆ.
ಮುಗಿಲು ಮುಟ್ಟಿದಆಕ್ರಂದನ

ಪಾಂಡವಪುರದಕನಗನಮರಡಿ ಸಮೀಪ ನಡೆದ ಬಸ್ ದುರಂತ ಸ್ಥಳದಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು.ಮೃತದಕುಟುಂಬದವರು, ಸಂಬಂಧಿಕರು ಹಾಗೂ ಸಾರ್ವಜನಿಕರ ಗೋಳು ಹೇಳತೀರದಾಗಿತ್ತು.ಬೆಳಗ್ಗೆ ಶಾಲೆಗೆ ಹೋದ ಮಕ್ಕಳು ಮನೆಗೆ ಬಾರದೆ ಹೆಣವಾಗಿದ್ದರು.ಯಾವುದೋ ಕೆಲಸಕ್ಕೆ ಹೋದವರೂ ಬಸ್ ದುರಂತಕ್ಕೆ ಸಿಲುಕಿ ಸಾವನ್ನಪ್ಪಿದ್ದರು.ಕೌಟುಂಬಿಕ ಕೆಲಸಕ್ಕೆಂದು ಹೋಗುವವರು ಕುಳಿತಲ್ಲೇ ಮರಣವನ್ನಪ್ಪಿದ್ದರು. ಈ ಎಲ್ಲವನ್ನು ನೆನೆದು ವಿ.ಸಿ.ನಾಲೆಯಲ್ಲಿ ಅಳುತ್ತಿದ್ದವರು, ಕಣ್ಣೀರಿಡುತ್ತಿದ್ದವರನ್ನುಕಂಡು ಕರಳು ಕಿತ್ತುಬರುತ್ತಿತ್ತು.

ಬಸ್‍ನಲ್ಲಿ ಇದ್ದವರೆಷ್ಟು ಎಂಬುದು ಇನ್ನೂಖಚಿತವಾಗಿಲ್ಲ. ಆದರೆ ನಾಲೆಯಿಂದಒಂದೊಂದೇ ಮೃತದೇಹವನ್ನು ಹೊರತೆಗೆಯುತ್ತಿದ್ದಂತೆದಡದಲ್ಲಿದ್ದವರಆಕ್ರಂದನ ಮುಗಿಲು ಮುಟ್ಟುತ್ತಿತ್ತು.ಓ ಇವನು ಸತ್ತನೇ, ಅವಳು ಮಡಿದಳೇ ಎಂದುಕೂಗುತ್ತಿದ್ದರು. ಕಾರ್ಯಾಚರಣೆ ನಡೆಸುತ್ತಿದ್ದವರುಒಂದೊಂದೇ ಮೃತದೇಹಗಳನ್ನು ಹೊರತೆಗೆಯುತ್ತಿದ್ದಂತೆ ಕರಳು ಕಿತ್ತುಬರುವಂತೆ ಕೂಗುತ್ತಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ