ನ. 27ರಂದು ಕನ್ನಡ ಗೆಳೆಯರ ಬಳಗ ವತಿಯಿಂದ ಪ್ರಶಸ್ತಿ ಪ್ರಧಾನ

ಬೆಂಗಳೂರು, ನ.23- ಕನ್ನಡ ಗೆಳೆಯರ ಬಳಗದ ವತಿಯಿಂದ ಇದೇ 27ರಂದು ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಕನ್ನಡ ಚಿರಂಜೀವಿ, ಕನ್ನಡ ಅರವಿಂದ ಪ್ರಶಸ್ತಿ ಪ್ರದಾನ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡ ಜಾಗೃತಿಯ ಧ್ವನಿಯಾಗಿ ಹತ್ತು ವರ್ಷಗಳಿಂದ ಕ್ರಿಯಾಶೀಲರಾಗಿರುವ ಕರ್ನಾಟಕ ಕಾರ್ಮಿಕ ಲೋಕ ಪತ್ರಿಕೆಯ ಸಹಯೋಗದಲ್ಲಿ ಕನ್ನಡ ನಾಡು-ನುಡಿಗೆ ದುಡಿಯುತ್ತಿರುವ ಕಾರ್ಮಿಕರನ್ನು ಸನ್ಮಾನಿಸಲಾಗುವುದು.

ಕನ್ನಡ ಪರಿಚಾರಕ ದಿವಂಗತ ಆಳ್ವ ಚಿರಂಜೀವಿ ನೆನಪಿನಲ್ಲಿ ಕನ್ನಡ ಚಿರಂಜೀವಿ ಪ್ರಶಸ್ತಿ, ಪತ್ರಕರ್ತ ಅರವಿಂದರಾಯ ಜೋಶಿ ಅವರ ನೆನಪಿನಲ್ಲಿ ಕನ್ನಡ ಅರವಿಂದ ಪ್ರಶಸ್ತಿಯನ್ನು ನೀಡಲಾಗುವುದು.

ಕಾರ್ಯಕ್ರಮವು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನ ಕೆರೆ ಸರ್ಕಾರಿ ಪ್ರೌಢಶಾಲೆಯನ್ನು ನಾಡಿಗೆ ಮಾದರಿಯಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಿರುವ ಸವಣಾಲಯ ಸುಭಾಷ್‍ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಲ್.ಪ್ರಶಾಂತ್ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಗುವುದು.

ಕವಿ ಡಾ.ಎಲ್.ಹನುಮಂತಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದು, ಖ್ಯಾತ ಸಾಹಿತಿ ಪೆÇ್ರ.ಕೃಷ್ಣಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ದ್ರಾವಿಡ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಶೇಷಶಾಸ್ತ್ರಿ ಮತ್ತು ಕನ್ನಡ ಹೋರಾಟಗಾರ ವ.ಚ.ಚನ್ನೇಗೌಡರು ಸೇರಿದಂತೆ ವಿವಿಧ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಕನ್ನಡ ಚಿರಂಜೀವಿ ಪ್ರಶಸ್ತಿಯನ್ನು ಕನ್ನಡ ಹೋರಾಟಗಾರ ಪಾಲನೇತ್ರ ಅವರಿಗೆ ಮತ್ತು ಕನ್ನಡ ಅರವಿಂದ ಪ್ರಶಸ್ತಿಯನ್ನು ಲೇಖಕ ಕೆ.ಎಸ್.ನಾಗರಾಜ್ ಅವರಿಗೆ ನೀಡಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ